ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: 'ಪ್ರಜಾಸೌಧ'ಕ್ಕಾಗಿ ಆಮರಣ ಉಪವಾಸ ಸತ್ಯಾಗ್ರಹ ಆರಂಭ

ರಬಕವಿ-ಬನಹಟ್ಟಿ: ತಾಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣವು ಬನಹಟ್ಟಿಯಲ್ಲೇ ಆಗಬೇಕೆಂದು ಒತ್ತಾಯಿಸಿ ಕಳೆದ 35 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆದಿದೆ.

ಸರ್ಕಾರ ಬೇಗನೆ ಸ್ಪಂದಿಸದೆ ಇರುವುದರಿಂದ ಗುರುವಾರ ಹೋರಾಟಗಾರರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೋರಗಾಂವಿ, ಶಿವಾನಂದ ಕಾಗಿ, ಬುಡನ್ ಜಮಾದಾರ ಸೇರಿ ಏಳು ಜನರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ. ಬುಧವಾರ ರಾತ್ರಿ ಅಹೋರಾತ್ರಿ ಸತ್ಯಾಗ್ರಹ ವನ್ನು ಕೈಗೊಳ್ಳುವುದರ ಮೂಲಕ ಹೋರಾಟದ ತೀವ್ರತೆ ಹೆಚ್ಚಾಗಿದೆ.

ನಗರದ ಎಲ್ಲಾ ಸಮುದಾಯಗಳು ಹಾಗೂ ಮಹಿಳೆಯರು ಸೇರಿ ಸಹಸ್ರಾರು ಸಂಖ್ಯೆಯಲ್ಲಿ ಬೃಹತ್ ಪ್ರತಿಭಟನೆ ಮೂಲಕ ವೇದಿಕೆಗೆ ಆಗಮಿಸಿದ ಹೋರಾಟಗಾರರು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇನ್ನಾದರೂ ಸರ್ಕಾರ ಹೋರಾಟಕ್ಕೆ ಸ್ಪಂದಿಸುತ್ತಾ ಎಂಬುದನ್ನು ಕಾದು ನೊಡಬೇಕಾಗಿದೆ.

Edited By :
PublicNext

PublicNext

10/09/2026 06:32 pm

Cinque Terre

7.43 K

Cinque Terre

0

ಸಂಬಂಧಿತ ಸುದ್ದಿ