ರಬಕವಿ-ಬನಹಟ್ಟಿ: ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಾಣವಾಗಬೇಕೆಂದು ಒತ್ತಾಯಿಸಿ ಕಳೆದ 38 ದಿನಗಳಿಂದ ಅನಿರ್ದಿಷ್ಟಾವಧಿ ಹಾಗೂ 6 ದಿನಕ್ಕೆ ಆಮರಣ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.
ಮಂಗಳವಾರ ಡಿವೈಎಸ್ಪಿ ರೋಶನ್ ನೇತೃತ್ವದಲ್ಲಿ ಆಗಮಿಸಿದ ಬಾರಿ ಪೊಲೀಸ್ ಪಡೆ ಉಪವಾಸ ನಿರತ ಸತ್ಯಾಗ್ರಹಿಗಳನ್ನು ಆಂಬುಲೆನ್ಸ್ ಮೂಲಕ ಕರೆದೊಯ್ದರು.
ಇದಕ್ಕೂ ಮುನ್ನ ಉಪವಾಸ ನಿರತರಾದ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೋರಗಾಂವಿ, ಮಾಳು ಹಿಪ್ಪರಗಿ ಮಾಹಿತಿ ನೀಡುತ್ತಾ, ಶಾಂತಿಯುತವಾಗಿ ಕಾನೂನು ರೀತಿಯಲ್ಲಿ ಸತ್ಯಾಗ್ರಹ ಮಾಡುತ್ತಾ ಬಂದಿದ್ದೇವೆ. ಉಪವಾಸ ಸತ್ಯಾಗ್ರಹದ ಮೂಲಕ ನಮಗೆ ಸ್ವಾತಂತ್ರ್ಯ ಬಂದಿದೆ. ನಮ್ಮ ಹೋರಾಟವನ್ನು ಹತ್ತಿಕ್ಕುವ ಸಂಚು ಸರ್ಕಾರದಿಂದ ನಡೆಯುತ್ತಿದೆ ಎಂದು ಆರೋಪಿಸಿದರು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾವಿರಾರು ನಾಗರಿಕರು ಸೇರಿ ಘೋಷಣೆಗಳನ್ನು ಕೂಗಿದರು.
PublicNext
15/09/2026 01:14 pm
LOADING...