ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬನಹಟ್ಟಿಯಲ್ಲೇ ಪ್ರಜಾಸೌಧ ಕಟ್ಟಡಕ್ಕೆ ಭರವಸೆ ನೀಡಿದ ಎಸಿ; ಹೋರಾಟ ಅಂತ್ಯ

ಬಾಗಲಕೋಟೆ : ಬನಹಟ್ಟಿ ನಗರದ ಆಸ್ತಿ ಸಂಖ್ಯೆ 8822ರಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಿಸುವ ಭರವಸೆಯನ್ನು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕಾರ ನೀಡಿದರು.

ಹೋರಾಟದ ವೇದಿಕೆಯಲ್ಲಿ ಎಸಿ ಶ್ವೇತಾ ಅವರು ಉಪವಾಸ ನಿರತ ಹೋರಾಟಗಾರರಿಗೆ ಜ್ಯೂಸ್ ಕುಡಿಸುವ ಮೂಲಕ ಹೋರಾಟವನ್ನು ಕೊನೆಗೊಳಿಸಿದರು.

ಹೋರಾಟಗಾರರು ಪಟಾಕಿ ಸಿಡಿಸಿ, ಗುಲಾಲ ಎರಚಿ ವಿಜಯೋತ್ಸವ ಆಚರಿಸಿದರು.

ಕ್ಷೇತ್ರಾಧಿಪತಿ ಕಾಡಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಘೋಷಣೆಗಳನ್ನು ಕೂಗಿದರು.

ದೇವಸ್ಥಾನದ ಆವರಣದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೋರಗಾಂವಿ ಸೇರಿದಂತೆ ಮಹಿಳೆಯರು ಹಾಗೂ ಸಾವಿರಾರು ಜನರು ಭಾಗವಹಿಸಿ ವಿಜಯೋತ್ಸವ ಆಚರಿಸಿದರು.

Edited By :
PublicNext

PublicNext

15/09/2026 06:13 pm

Cinque Terre

8.83 K

Cinque Terre

0

ಸಂಬಂಧಿತ ಸುದ್ದಿ