ಬೆಂಗಳೂರು: ನಿರಂತರ ಕೆಲಸದ ಒತ್ತಡ ಹಾಗೂ ಸತತ ಓಡಾಟದ ಪರಿಣಾಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದಲ್ಲಿ ಇಂದು ಕೊಂಚ ವ್ಯತ್ಯಾಸ ಕಂಡುಬಂದಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಸಿಎಂಗೆ ಅಲ್ಪ ಸುಸ್ತು ಕಾಣಿಸಿಕೊಂಡಿದೆ. ತಕ್ಷಣವೇ ವಿಧಾನಸೌಧದ ವೈದ್ಯರನ್ನು ಕರೆಸಲಾಗಿದ್ದು, ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿದೆ.
ಪ್ರಾಥಮಿಕ ತಪಾಸಣೆಯಲ್ಲಿ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದಿದ್ದು, ವೈದ್ಯರು ಸ್ಥಳದಲ್ಲೇ ಚಿಕಿತ್ಸೆ ನೀಡಿ ವಿಶ್ರಾಂತಿಗೆ ಸೂಚಿಸಿದ್ದಾರೆ. ಕೆಲಕಾಲ ವಿಶ್ರಾಂತಿ ಪಡೆದ ಬಳಿಕ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದುಬಂದಿದೆ.
ನಿನ್ನೆಯಿಂದ ರಾಜ್ಯದ ವಿವಿಧೆಡೆ ಸತತ ಪ್ರಯಾಣ ನಡೆಸಿದ್ದ ಸಿಎಂ, ಇಂದು ಬೆಳಗ್ಗೆಯಿಂದಲೂ ಸಭೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ನಿರಂತರ ಓಡಾಟ ಹಾಗೂ ಕೆಲಸದ ಒತ್ತಡದಿಂದಾಗಿ ರಕ್ತದೊತ್ತಡದಲ್ಲಿ ವ್ಯತ್ಯಾಸ ಉಂಟಾಗಿರುವುದಾಗಿ ತಿಳಿದುಬಂದಿದೆ.
PublicNext
08/09/2026 09:38 pm
LOADING...