ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೈಬರ್ ಕಿರುಕುಳಕ್ಕೆ ಬ್ರೇಕ್, ಹುಬ್ಬಳ್ಳಿ ಪೊಲೀಸರಿಂದ AI ವಿಡಿಯೋ ಮೂಲಕ ವಿನೂತನ ಜಾಗೃತಿ!

ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ, ಬೆದರಿಕೆ, ಬ್ಲ್ಯಾಕ್‌ಮೇಲ್ ಹಾಗೂ ಅನಗತ್ಯ ಸಂದೇಶಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸರು ವಿನೂತನ ಹೆಜ್ಜೆ ಇಟ್ಟಿದ್ದಾರೆ.

ಯುವಕರು ಸೇರಿದಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ವಹಿಸುವಂತೆ ತಿಳಿಸುವ ಉದ್ದೇಶದಿಂದ AI ತಂತ್ರಜ್ಞಾನ ಬಳಸಿ ವಿಶೇಷ ಜಾಗೃತಿ ವಿಡಿಯೋ ಸಿದ್ಧಪಡಿಸಲಾಗಿದೆ.

ಯಾರಾದರೂ ಆನ್‌ಲೈನ್‌ನಲ್ಲಿ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ಖಾಸಗಿ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಅಥವಾ ಅಸಭ್ಯ ಸಂದೇಶಗಳನ್ನು ಕಳುಹಿಸುವುದು ಕಂಡುಬಂದರೆ, ಅದನ್ನು ನಿರ್ಲಕ್ಷಿಸದೆ ಪೊಲೀಸರಿಗೆ ದೂರು ನೀಡುವಂತೆ ಮನವಿ ಮಾಡಲಾಗಿದೆ.

“ಆನ್‌ಲೈನ್‌ನಲ್ಲಿ ಕಿರುಕುಳವಾದರೆ ಮೌನವಾಗಬೇಡಿ… ಪೊಲೀಸರಿಗೆ ಮಾಹಿತಿ ನೀಡಿ” ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಇದೇ ಉದ್ದೇಶದಿಂದ ಪೊಲೀಸ್ ಇಲಾಖೆ AI ವಿಡಿಯೋ ಮೂಲಕ ಸರಳ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಜಾಗೃತಿ ಸಂದೇಶ ನೀಡಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/09/2026 12:24 pm

Cinque Terre

34.86 K

Cinque Terre

1

ಸಂಬಂಧಿತ ಸುದ್ದಿ