ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇಶವ್ಯಾಪಿ ಹಬ್ಬಿದ ನಕಲಿ ಮೆಡಿಕಲ್ ಮಾಫಿಯಾ ಜಾಲಕ್ಕೆ ಎಸ್‌ಐಟಿ ಶಾಕ್; ದೇಶದ 9 ಕಡೆ ಏಕಕಾಲಕ್ಕೆ ದಾಳಿ

ಬೆಂಗಳೂರು : ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಕಲಿ ಔಷಧ ಜಾಲ ಹಬ್ಬಿರುವುದು ಪತ್ತೆಯಾಗಿದ್ದು, ತಾವರೆಕೆರೆಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ನಕಲಿ ಔಷಧ ಜಾಲದ ತನಿಖೆಯನ್ನು ಕೈಗೆತ್ತಿಕೊಂಡ ಎಸ್‌ಐಟಿ, ಈ ಮಾಫಿಯಾದ ಜಾಲವನ್ನು ಬಯಲಿಗೆಳೆದಿದೆ.

ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ, ದೆಹಲಿ ಹಾಗೂ ಬೆಂಗಳೂರು ಸೇರಿದಂತೆ ದೇಶದ ಒಟ್ಟು 9 ಪ್ರಮುಖ ಸ್ಥಳಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಕಿಂಗ್‌ಪಿನ್ ಪ್ರಶಾಂತ್‌ಗೆ ಸೇರಿದ ನಗರದ ಮಿನರ್ವಾ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕುರಿತು ನಮ್ಮ ಪ್ರತಿನಿಧಿ ಶ್ರೀನಿವಾಸ್ ಸ್ಥಳದಿಂದ ನೀಡಿರುವ ಸಂಪೂರ್ಣ ವರದಿ ಇಲ್ಲಿದೆ.

Edited By :
PublicNext

PublicNext

11/09/2026 03:10 pm

Cinque Terre

58.97 K

Cinque Terre

0

ಸಂಬಂಧಿತ ಸುದ್ದಿ