ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ಪ್ರೋಟೀನ್ ಪೌಡರ್ ಡಬ್ಬದಲ್ಲಿ ಹುಳುಗಳು..! ಖ್ಯಾತ ನಟಿ ಬಿಪಾಶಾ ಬಸು ಆರೋಪ

ದೇಶಾದ್ಯಂತ ಆಹಾರ ಪದಾರ್ಥಗಳ ಕಲಬೆರಕೆ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಬಾಲಿವುಡ್ ನಟಿ ಬಿಪಾಶಾ ಬಸು ತಾವು ಬಳಸುವ ಪ್ರೋಟೀನ್ ಪೌಡರ್ ಗುಣಮಟ್ಟದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಜನಪ್ರಿಯ 'ಐಸೊಪ್ಯೂರ್ ವೇ ಪ್ರೋಟೀನ್' ಬ್ರ್ಯಾಂಡ್‌ನ ಹೊಸದಾಗಿ ಸೀಲ್ ತೆಗೆದ ಡಬ್ಬದೊಳಗೆ ಸಣ್ಣಪುಟ್ಟ ಹುಳುಗಳಂತಹ ವಸ್ತುಗಳು ಪತ್ತೆಯಾಗಿವೆ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಆರೋಗ್ಯಕ್ಕಾಗಿ ದುಬಾರಿ ಉತ್ಪನ್ನಗಳನ್ನು ನಂಬಿ ಖರೀದಿಸುವ ಗ್ರಾಹಕರಿಗೆ ಇದು ದೊಡ್ಡ ದ್ರೋಹ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತ ತುಕಾರಾಮ ಮುಂಢೆ ಅವರಿಗೆ ಟ್ಯಾಗ್ ಮಾಡಿ ದೂರು ನೀಡಿರುವ ನಟಿ, ಇಂತಹ ಮೋಸ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ವಿಡಿಯೋದಲ್ಲಿರುವುದು ನಿಜವಾಗಿಯೂ ಹುಳುಗಳೇ ಅಥವಾ ಬೇರೇನಾದರೂ ಲೋಪವೇ ಎಂಬುದರ ಕುರಿತು ಅಧಿಕೃತ ದೃಢೀಕರಣ ಬರಬೇಕಿದೆ.

Edited By :
PublicNext

PublicNext

12/09/2026 02:39 pm

Cinque Terre

70.27 K

Cinque Terre

2

ಸಂಬಂಧಿತ ಸುದ್ದಿ