ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆ ಮೇಲೆ ಆರ್‌ಪಿಎಫ್ ಕಾನ್ಸ್‌ಸ್ಟೇಬಲ್‌ನಿಂದ ಕ್ರೂರ ಹಲ್ಲೆ ; ವೈರಲ್ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ಹೈದರಾಬಾದ್: ಪೊಲೀಸ್ ಎಂದರೆ ಜನರಿಗೆ ನಂಬಿಕೆ, ಭಯ ಹಾಗೂ ಗೌರವವಿರುತ್ತದೆ. ಆದರೆ ಇಲ್ಲೊಬ್ಬ ಪೊಲೀಸಪ್ಪ ಮಾಡಿರುವ ಅಮಾನವೀಯ ಕೃತ್ಯವು "ಇವರೇನು ಪೊಲೀಸರೋ ಅಥವಾ ರಾಕ್ಷಸರೋ?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಹಫೀಜ್‌ಪೇಟ್ (Hafizpet) ರೈಲು ನಿಲ್ದಾಣದ ಹೊರಭಾಗದಲ್ಲಿ ಆರ್‌ಪಿಎಫ್ (RPF) ಕಾನ್ಸ್‌ಸ್ಟೇಬಲ್ ಒಬ್ಬರು ಮಹಿಳೆಯೊಬ್ಬರನ್ನು ಲಾಠಿಯಿಂದ ಹೊಡೆದು, ಕೊದಲು ಹಿಡಿದು ಭೀಕರವಾಗಿ ಎಳೆದೊಯ್ಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ, ಆ ಮಹಿಳೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದಾಗ್ಯೂ, ಮಹಿಳೆ ತಪ್ಪು ಮಾಡಿದ್ದರೆ ಆಕೆಯ ಮೇಲೆ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕಿತ್ತೇ ಹೊರತು, ಈ ರೀತಿಯಲ್ಲಿ ರಸ್ತೆಯಲ್ಲೇ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

ಕಾನ್ಸ್‌ಸ್ಟೇಬಲ್ ಅವರ ಈ ವಿಕೃತ ವರ್ತನೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ಸಂಘಟನೆಗಳು ಒತ್ತಾಯಿಸುತ್ತಿವೆ.

Edited By :
PublicNext

PublicNext

19/09/2026 09:05 pm

Cinque Terre

14.86 K

Cinque Terre

1

ಸಂಬಂಧಿತ ಸುದ್ದಿ