ಹಾಸನ: ಬಾಣಾವರ ಯೋಜನಾ ಕಚೇರಿ ವ್ಯಾಪ್ತಿಯ ಅರಕೆರೆ ಕಾರ್ಯಕ್ಷೇತ್ರದ ಮಾರಗೊಂಡನಹಳ್ಳಿಯಲ್ಲಿ ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಶುವೈದ್ಯ ಡಾ. ಷಡಕ್ಷರಿ ಮಾತನಾಡಿ, ರೈತರಿಗೆ ಹೈನುಗಾರಿಕೆಯ ವೈಜ್ಞಾನಿಕ ಪದ್ಧತಿಗಳ ಕುರಿತು ಮಾಹಿತಿ ನೀಡಿ ಹಸುಗಳ ಗರ್ಭಧಾರಣೆ, ಕರುಗಳ ವೈಜ್ಞಾನಿಕ ನಿರ್ವಹಣೆ, ಕೆಚ್ಚಲು ಬಾವು ರೋಗದ ನಿಯಂತ್ರಣ, ಕಾಲುಬಾಯಿ ರೋಗದ ಲಕ್ಷಣಗಳು ಹಾಗೂ ತಡೆಗಟ್ಟುವ ಕ್ರಮಗಳು ಮತ್ತು ಪೌಷ್ಟಿಕ ಮೇವಿನ ನಿರ್ವಹಣೆ ಕುರಿತು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಸುನಿತಾ, ಊರಿನ ಮುಖ್ಯಸ್ಥ ಗಿರೀಶಪ್ಪ ಉಪಸ್ಥಿತರಿದ್ದರು. ಯೋಜನೆಯ ಕೃಷಿ ಮೇಲ್ವಿಚಾರಕರಾದ ಗಣೇಶ ಸಿ.ಎಸ್. ಹಾಗೂ ವಲಯ ಮೇಲ್ವಿಚಾರಕ ಪ್ರೇಮಾ ಭಾಗವಹಿಸಿದ್ದರು.
Kshetra Samachara
13/09/2026 10:37 am
LOADING...