ಸಕಲೇಶಪುರ: ಬರದ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ತಕ್ಷಣ ಸ್ಪಂದಿಸುವಂತೆ ವಾಟೆಹೊಳೆ ಜಲಾಶಯದ ಕಾಲುವೆಗಳಿಗೆ ನಾಳೆಯಿಂದಲೇ ನೀರು ಬಿಡುಗಡೆ ಮಾಡಬೇಕು ಎಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಆಲೂರು ತಾಲೂಕಿನ ಸುಮಾರು 18,000 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ವಾಟೆಹೊಳೆ ಬಲದಂಡೆ ನಾಲೆ ಹಾಗೂ ನಾಕಲಗೂಡು ಶಾಖಾ ನಾಲೆಗಳ ಆಧುನೀಕರಣ ಸೇರಿದಂತೆ ವಿವಿಧ ನೀರಾವರಿ ಕಾಮಗಾರಿಗಳಿಗೆ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಸಗಲನಿ ಹಳ್ಳದ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶಂಕು ತೀರ್ಥ ಪಿಕ್ ಅಪ್ ನಾಲೆಯ ಲೈನಿಂಗ್ ಮತ್ತು ದುರಸ್ತಿ, ಹಾನಿಗೊಳಗಾದ ಕಟ್ಟಡಗಳ ಪುನರ್ ನಿರ್ಮಾಣ, ಯಗಚಿ ಎಡದಂಡೆ ಮುಖ್ಯ ನಾಲೆ ಹಾಗೂ ವಿತರಣಾ ನಾಲೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆಯೂ ಒತ್ತಾಯಿಸಿದರು.
ಇದರೊಂದಿಗೆ ಎತ್ತಿನಹೊಳೆ ಯೋಜನಾ ಪ್ರದೇಶದ ಬಾಧಿತ ಗ್ರಾಮಗಳಿಗೆ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿಪತ್ರ ಸಲ್ಲಿಸಲಾಯಿತು.
ರೈತರ ಬದುಕು ನೀರಿನ ಮೇಲೆ ಅವಲಂಬಿತವಾಗಿದ್ದು, ಸಮಯಕ್ಕೆ ನೀರು ದೊರೆತರೆ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ವಾಟೆಹೊಳೆ ಜಲಾಶಯದ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕು ಎಂಬುದು ಶಾಸಕ ಸಿಮೆಂಟ್ ಮಂಜು ಅವರ ಮನವಿಯಾಗಿದೆ.
PublicNext
18/09/2026 01:50 pm
LOADING...