ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಪ್ಪನ ಆಶೀರ್ವಾದ ಪಡೆದ ಸಚಿನ್ ಕುಟುಂಬ : ಗಣೇಶನ ಮುಂದೆ ತಲೆಬಾಗಿದ ಕ್ರಿಕೆಟ್ ದೇವರು

ಮುಂಬೈ : ಗಣೇಶ ಚತುರ್ಥಿಯ ಸಂಭ್ರಮದ ನಡುವೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಸಂಪೂರ್ಣ ಕುಟುಂಬ ಸಮೇತರಾಗಿ ಗಣಪತಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರೊಂದಿಗೆ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಪುತ್ರಿ ಸಾರಾ ತೆಂಡೂಲ್ಕರ್ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ವಿಘ್ನನಿವಾರಕನಿಗೆ ಕೈಮುಗಿದು ಆಶೀರ್ವಾದ ಪಡೆದರು. ತೆಂಡೂಲ್ಕರ್ ಕುಟುಂಬವು ಒಟ್ಟಾಗಿ ಬಂದು ಬಪ್ಪನ ದರ್ಶನ ಪಡೆದ ಸುಂದರ ಕ್ಷಣಗಳು ಅಭಿಮಾನಿಗಳ ಮನಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಗಳು ಭಾರೀ ವೈರಲ್ ಆಗುತ್ತಿವೆ.

Edited By : Nirmala Aralikatti
PublicNext

PublicNext

15/09/2026 02:04 pm

Cinque Terre

18.4 K

Cinque Terre

0

ಸಂಬಂಧಿತ ಸುದ್ದಿ