ಗದಗ: ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ನಡುವೆ, ಗಣೇಶನ ವಾಹನವಾಗಿರುವ ಮೂಷಿಕನಿಗೂ (ಇಲಿ) ವಿಶೇಷ ಪೂಜೆ ಸಲ್ಲಿಸುವ ವಿಶಿಷ್ಟ ಪರಂಪರೆ ಬೆಟಗೇರಿ ನಗರದ ನೇಕಾರರು ಹಾಗೂ ಟೇಲರ್ ಸಮುದಾಯದಲ್ಲಿ ಇಂದಿಗೂ ಅನಾವರಣಗೊಳ್ಳುತ್ತಾ ಬಂದಿದೆ.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ನೇಕಾರರು ಮತ್ತು ಟೇಲರ್‌ಗಳು ತಮ್ಮ ವೃತ್ತಿಯೊಂದಿಗೆ ನೇರ ಸಂಬಂಧ ಹೊಂದಿರುವ ಬಟ್ಟೆ, ಸೀರೆ ಹಾಗೂ ರೇಷ್ಮೆ ನೂಲುಗಳಿಗೆ ಯಾವುದೇ ಹಾನಿ ಉಂಟಾಗದಿರಲಿ ಎಂಬ ನಂಬಿಕೆಯಿಂದ ಮೂಷಿಕನಿಗೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ತಲೆಮಾರುಗಳಿಂದ ಹಿರಿಯರು ನಡೆಸಿಕೊಂಡು ಬಂದಿರುವ ಈ ಸಂಪ್ರದಾಯವನ್ನು ಇಂದಿನ ಯುವ ಪೀಳಿಗೆಯೂ ಶ್ರದ್ಧೆಯಿಂದ ಮುಂದುವರಿಸಿಕೊಂಡು ಬರುತ್ತಿದೆ.
ಪೂಜೆಯ ಸಂದರ್ಭದಲ್ಲಿ ಮೂಷಿಕನಿಗೆ ವಿವಿಧ ರೀತಿಯ ನೈವೇದ್ಯಗಳನ್ನು ಅರ್ಪಿಸಿ ಭಕ್ತಿಯಿಂದ ಪ್ರಾರ್ಥನೆ ಮಾಡಲಾಗುತ್ತದೆ.
PublicNext
15/09/2026 08:42 pm
LOADING...