ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂ.ಬಿ.ಪಾಟೀಲರ ಧಮ್ಕಿಗೆ ನಾನು ಅಂಜಲ್ಲ: ಯತ್ನಾಳ್

ವಿಜಯಪುರ: ಸಚಿವ ಎಂ.ಬಿ.ಪಾಟೀಲ ಹಾಗೂ ತಮ್ಮ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಅವರ ಧಮ್ಕಿಗೆ ಅಂಜಿ ನಾನು ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀಕ್ಷ್ಣವಾಗಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಹೊಟ್ಟೆಕಿಚ್ಚು ಹೆಚ್ಚಾಗಿದೆ. ತಾಜ್ ಬಾವಡಿ ನಾನೇ ಕಟ್ಟಿಸಿದ್ದೇನೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಅಸಮಾಧಾನಿತ ಗಿರಾಕಿಗಳು ಹೆಚ್ಚಾಗಿದ್ದಾರೆ ಎಂದು ಎಂ.ಬಿ.ಪಾಟೀಲ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ನಮ್ಮ ಯಡಿಯೂರಪ್ಪ ಕೊಟ್ಟಿದ್ದಾರೆ’ ಎಂದು ಕೆಲವರು ಹೇಳುತ್ತಾರೆ. ನಿಮ್ಮ ಯಡಿಯೂರಪ್ಪ ಏನೂ ಕೊಟ್ಟಿಲ್ಲ ಎಂದು ಟೀಕಿಸಿದ ಯತ್ನಾಳ್, ಬಬಲೇಶ್ವರ ಮತಕ್ಷೇತ್ರದಲ್ಲಿ ಎಂ.ಬಿ.ಪಾಟೀಲ ಗೆಲ್ಲಲು ಅನುಕೂಲವಾಗುವಂತೆ ಯಡಿಯೂರಪ್ಪ ಅವರು ವೀಕ್ ಕ್ಯಾಂಡಿಡೇಟ್‌ಗಳನ್ನು ಕಣಕ್ಕಿಳಿಸುತ್ತಾರೆ ಎಂದು ಆರೋಪಿಸಿದರು.

ಎಂ.ಬಿ.ಪಾಟೀಲ ಅವರು ಏನು ಧಮ್ಕಿ ನೀಡಿದರೂ ಅದಕ್ಕೆ ನಾನು ಅಂಜುವುದಿಲ್ಲ. ಅವರ ಧಮ್ಕಿಗೆ ಹೆದರಿ ರಾಜಕಾರಣ ಮಾಡುವುದಿಲ್ಲ. ಎಂ.ಬಿ.ಪಾಟೀಲ ಮತ್ತು ನನ್ನ ನಡುವೆ ಯಾವುದೇ ಹೊಂದಾಣಿಕೆ ಇಲ್ಲ.

ವಿಜಯಪುರದ ಜನರು ಏನೂ ಹುಚ್ಚರಲ್ಲ. ಎಂ.ಬಿ.ಪಾಟೀಲ ಅವರು ಹತ್ತು ಬಾರಿ ಬಂದು ಏನು ಮಾಡಿದರೂ ವಿಜಯಪುರದ ಜನರು ಅವರ ಮಾತು ಕೇಳುವುದಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಎಂಎಲ್‌ಸಿ ಚುನಾವಣೆಯಲ್ಲಿ ಬೆಂಬಲ ವಿಚಾರ

ವಿಧಾನ ಪರಿಷತ್ ಚುನಾವಣೆಯಲ್ಲಿ ಎಂ.ಬಿ.ಪಾಟೀಲ ಅವರು ತಮ್ಮನ್ನು ಬೆಂಬಲಿಸಿದ್ದರು ಎಂಬ ವಿಚಾರಕ್ಕೂ ಯತ್ನಾಳ್ ಸ್ಪಷ್ಟನೆ ನೀಡಿದರು.

‘ಎರಡು ಮತಗಳಿದ್ದವು. ಒಂದು ಮತವನ್ನು ಎಸ್.ಆರ್.ಪಾಟೀಲ ಅವರಿಗೆ ಹಾಕಿ ಎಂದು ಅವರು ಹೇಳಿದರು. ಇನ್ನೊಂದು ಮತವನ್ನು ಎಲ್ಲಿ ಹಾಕಬೇಕು, ಯತ್ನಾಳ್‌ಗೆ ಹಾಕಿ ಎಂದು ಅವರು ಎಲ್ಲಿಯೂ ಹೇಳಿಲ್ಲ’ ಎಂದು ತಿಳಿಸಿದರು.

ಬಬಲೇಶ್ವರದಲ್ಲಿ ಹೊಂದಾಣಿಕೆಯ ಗಿರಾಕಿಗಳಿದ್ದಾರೆ. ಎಂ.ಬಿ.ಪಾಟೀಲ ಅವರ ಕಡೆಯಿಂದ ಏನೋ ಬಂತು, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳಿವೆ. ಆದರೆ ಅವರೊಂದಿಗೆ ನನಗೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.

Edited By :
PublicNext

PublicNext

16/09/2026 08:01 am

Cinque Terre

10.5 K

Cinque Terre

0

ಸಂಬಂಧಿತ ಸುದ್ದಿ