ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಲೇಡಿ ಗ್ಯಾಂಗ್ ಆ್ಯಕ್ಟಿವ್ ಆಗಿದೆ.. ಪ್ಲಾಸ್ಟಿಕ್ ಆರಿಸುವ ನೆಪದಲ್ಲಿ ಬಂದ ಏಂಟು ಜನ ಲೇಡಿ ಕಳ್ಳರ ಗ್ಯಾಂಗ್ ಟಿಂಬರ್ ಯಾಡ್‌ದಲ್ಲಿದ್ದ ಬೆಲೆ ಬಾಳುವ ಮಷಿನ್ ಮತ್ತು ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೌದು,,,, ಹೀಗೆ ಬೆಳ್ಳಂ ಬೆಳಗ್ಗೆ ನಸುಕಿನ ಜಾವ, ಹುಬ್ಬಳ್ಳಿಯ ಉಣಕಲ್ ಬಳಿ ಇರುವ ಟಿಂಬರ್ ಯಾಡ್‌ಗೆ ಲೇಡಿ ಗ್ಯಾಂಗ್ ನುಗ್ಗಿದೆ. ಅಲ್ಲಿದ್ದ ಸಾಗರ ಪವಾರ್ ಕಟ್ಟಿಗೆ ಯಾಡ್‌ದಲ್ಲಿದ್ದ ಹಾರ್ಡ್ ವೇರ್, ಅಲ್ಯೂಮಿನಿಯಂ, ಕಟಿಂಗ್ ಮಷಿನ್ ಸೇರಿದಂತೆ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೇ ಇನ್ನೂವರೆಗೂ ಪ್ರಕರಣ ದಾಖಲು ಮಾಡಿಕೊಂಡಿಲ್ಲವಂತೆ. ದೂರು ದಾಖಲಿಸಿ ಈ ಕಳ್ಳಿಯರನ್ನು ಅರೆಸ್ಟ್ ಮಾಡಬೇಕಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2026 04:00 pm
LOADING...