ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಣ್ಣೆ ಹೊಡೆದು ಕಾಲೇಜಿಗೆ ಹೋಗ್ತಿದ್ದ ಸಿಬ್ಬಂದಿ..! ತಾರಿಹಾಳ ಸರ್ಕಾರಿ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಕ್ರಮ ಚಟುವಟಿಕೆ

ಪಬ್ಲಿಕ್ ನೆಕ್ಸ್ಟ್ ಫಾಲೋವಪ್ ವರದಿ....

ಹುಬ್ಬಳ್ಳಿ: ಹುಬ್ಬಳ್ಳಿಯ ತಾರಿಹಾಳದ ಸರ್ಕಾರಿ ರೂರಲ್ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಕಾಲೇಜಿನಲ್ಲಿ ಹಾಜರಿ ಹಾಕಿ, ಕರ್ತವ್ಯದ ವೇಳೆಯಲ್ಲೇ ಬಾರ್‌ಗೆ ಹೋಗಿ ಎಣ್ಣೆ ಹೊಡೆಯುತ್ತಿರುವ ಈ ಆರೋಪದ ಹಿನ್ನೆಲೆಯಲ್ಲಿ ವಿಡಿಯೋ ಮತ್ತು ದಾಖಲೆ ಸಮೇತ ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿಯನ್ನು ಬಿತ್ತರಿಸಿತ್ತು. ಆದ್ರೆ ರಾಜಾರೋಷವಾಗಿ ಬಾರ್‌ ಲ್ಲಿ ಎಣ್ಣೆ ಹಾಕ್ತಿರೋ ಆ ಸರ್ಕಾರಿ ಸಿಬ್ಬಂದಿ ಮೇಲೆ ಇನ್ನೂ ಕ್ರಮ ಜರುಗಿಲ್ಲ.

ಹೌದು,,, ಈ ವಿಡಿಯೋದಲ್ಲಿ ಕಾಲೇಜು ಸಮಯದಲ್ಲೇ ಬಿಂದಾಸ್ ಆಗಿ ಎಣ್ಣೆ ಹಾಕ್ತಿರೋ ಕಂಪ್ಯೂಟರ್ ಆಪರೇಟರ್ ಶಿವಕುಮಾರ್ ಮುದಿಯಾಲರ್, ಅಟೆಂಡರ್ ರಾಜಶೇಖರ ಹಕ್ಕಿ ಈ ಇಬ್ಬರು ಹುಬ್ಬಳ್ಳಿಯ ತಾರಿಹಾಳದಲ್ಲಿರುವ SGES ಸರ್ಕಾರಿ ರೂರಲ್ ಪಾಲಿಟೆಕ್ನಿಕ್ ಕಾಲೇಜು ಸಿಬ್ಬಂದಿ, ಈ ಇಬ್ಬರು ಪುಣ್ಯಾತ್ಮರ ಮೇಲೆ ಇನ್ನೂ ಕ್ರಮ ಜರುಗಿಸಿಲ್ಲ..

ಕಂಪ್ಯೂಟರ್ ಆಪರೇಟರ್ ಶಿವಕುಮಾರ್ ಮುದಿಯಾಲರ್ ಹಾಗೂ ಅಟೆಂಡರ್ ರಾಜಶೇಖರ ಹಕ್ಕಿ ಅವರು ಕಾಲೇಜಿನ ಕರ್ತವ್ಯದ ವೇಳೆಯಲ್ಲೇ ತಾರಿಹಾಳದ ಜಯಲಕ್ಷ್ಮಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ತೆರಳಿ ಸಾರಾಯಿ ಕುಡಿದು ಬರುತ್ತಿರುವ ಆರೋಪ ಕೇಳಿಬಂದಿದೆ.

ಆಗಸ್ಟ್ 3 ಮತ್ತು ಆಗಸ್ಟ್ 14 ರಂದು ಕಾಲೇಜಿನಲ್ಲಿ ಸಹಿ ಮಾಡಿ ಸೀದಾ ಬಾರ್‌ಗೆ ಹೋಗಿ ಎಣ್ಣೆ ಹೊಡೆಯುತ್ತಿದ್ದಾರೆ. ಇದು ಲೊಕೇಶನ್ ಸಮಯ ಸಮೇತ ಮಧ್ಯಾಹ್ನ 1 ಗಂಟೆ 14 ನಿಮಿಷದ ವೇಳೆಯಲ್ಲಿ ಬಾರ್‌ನಲ್ಲಿ ಮದ್ಯ ಸೇವನೆ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಕಾಲೇಜಿನ ಕರ್ತವ್ಯದ ಸಮಯದಲ್ಲೇ ಸಿಬ್ಬಂದಿ ಬಾರ್‌ನಲ್ಲಿ ಇರಲು ಹೇಗೆ ಸಾಧ್ಯ? ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದ ಸಿಬ್ಬಂದಿಯೇ ಇಂತಹ ವರ್ತನೆ ಮಾಡುತ್ತಿದ್ದರೆ, ಇದರ ಪರಿಣಾಮ ವಿದ್ಯಾರ್ಥಿಗಳ ಮೇಲೆ ಏನಾಗಬಹುದು...? ಇವರ ಕರ್ಮಕಾಂಡದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸುದ್ದಿ ಬಿತ್ತರಿಸಿದೆ, ಮೇಲಾಧಿಕಾರಿಗಳು ಇವರ ಮೇಲೆ ಕ್ರಮ ಜರುಗಿಸಬೇಕೆಂದು ವಿದ್ಯಾರ್ಥಿಗಳ ಒತ್ತಾಯವಾಗಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2026 06:07 pm

Cinque Terre

8.43 K

Cinque Terre

1

ಸಂಬಂಧಿತ ಸುದ್ದಿ