ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಜನರೇ ಹುಷಾರ್.. ಸೈಟ್ ಖರೀದಿ ಮಾಡುವ ಮುನ್ನ ಇರಲಿ ಎಚ್ಚರ; 215 ಜನಕ್ಕೆ ಮೋಸ

ಹುಬ್ಬಳ್ಳಿ: ಹುಬ್ಬಳ್ಳಿಯ ಅಮರನಗರ ಗಿರಿಯಾಳ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಭಾರೀ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಅಮರನಗರ ಫೇಸ್–1ರಲ್ಲಿ ಪ್ಲಾಟ್ ಖರೀದಿಸಿದ್ದ 215ಕ್ಕೂ ಹೆಚ್ಚು ಜನರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಒಬ್ಬೊಬ್ಬರು ತಲಾ 3 ರಿಂದ 4 ಲಕ್ಷ ರೂಪಾಯಿವರೆಗೆ ಹಣ ನೀಡಿದ್ದರೂ, ಪ್ಲಾಟ್ ಸಿಗದೆ ಪರದಾಡುವಂತಾಗಿದೆ.

ಹೌದು,,, ಹೀಗೆ ಹಣ ಕೊಟ್ಟು ಸೈಟ್‌ ಸಿಗದೆ ಇತ್ತ ಹಣನೂ ಸಿಗದೆ ನೂರಾರು ಜನರು ಗೋಳಾಡುತ್ತಿರುವ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಗಿರಿಯಾಳ ಬಳಿ ಅಮರನಗರ ಫೇಸ್–1 ಎಂದು ರಯಿಸಖಾನ್ ಪಠಾಣ, ಪೈರೋಜ್ ಖಾನ್ ಪಠಾಣ ಹಾಗೂ ಎಸ್.ಎಸ್. ಖಾನ್ ಪಠಾಣ ಎಂಬುವವರು ಲೇಔಟ್ ಮಾಡಿ ಒಂದೊಂದು ಪ್ಲಾಟ್‌ಗೆ ಮೂರು ನಿಂದ ನಾಲ್ಕು ಲಕ್ಷ ರೂಪಾಯಿ ಹಣ ನೀಡಿ ಬರೊಬ್ಬರಿ 215ಕ್ಕೂ ಹೆಚ್ಚು ಜನರು ಪ್ಲಾಟ್ ಖರೀದಿಸಿದ್ದರು. ಆದ್ರೆ ಆ ಮಾಲೀಕರು ಇಡೀ ಲೇಔಟ್‌ನ್ನು ಬೇರೆದವರಿಗೆ ಮಾರಾಟ ಮಾಡಿದ್ದು, ಇದೀಗ ಎಲ್ಲರು ಅತಂತ್ರರಾಗಿದ್ದಾರೆ.

ಈ ಪ್ರಕರಣದಲ್ಲಿ ಲೇಔಟ್ ಮಾಲೀಕರಾದ ರಯಿಸಖಾನ್ ಪಠಾಣ, ಪೈರೋಜ್ ಖಾನ್ ಪಠಾಣ ಹಾಗೂ ಎಸ್.ಎಸ್. ಖಾನ್ ಪಠಾಣ ವಿರುದ್ಧ ಆರೋಪ ಕೇಳಿಬಂದಿದೆ.

ಅದೇ ರೀತಿ ಏಜೆಂಟ್‌ಗಳಾದ ಅಲ್ತಾಫ್ ಖಾನ್, ಜವಳಿ ರಫಿಕ್, ಲೈಹಿಕ್ ಮಕಾಂದಾರ್ ಹಾಗೂ ಮ್ಯಾನೇಜರ್ ವಹಿದ್ ಖಾನ್ ಪಠಾಣ ಅವರ ಮೇಲೂ ಖರೀದಿದಾರರು ಆರೋಪ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದಿದೆ ಎಂದು ಆರೋಪಿಸಿರುವ ಸಂತ್ರಸ್ತರು, ತಮ್ಮ ಹಣ ಅಥವಾ ಪ್ಲಾಟ್‌ಗಳನ್ನು ಮರಳಿ ಕೊಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹುಬ್ಬಳ್ಳಿ ಜನರೇ ಹುಷಾರ್ ಆಗಿರಿ.. ಲೇಔಟ್ ದಲ್ಲಿ ಪ್ಲಾಟ್ ಖರೀದಿಸುವ ಮುನ್ನ ಎಚ್ಚರ ವಹಿಸಿ.. ಯಾಕೆಂದರೆ ಪಂಗನಾಮ ಹಾಕಲು ಭಕಪಕ್ಷಿತರ ಕಯ್ತಾ ಕುಳಿತಿದ್ದಾರೆ.

ಕ್ಯಾಮೆರಾ ಪರ್ಸನ್ ಶೇಕರ ಜೊತೆ ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2026 05:57 pm

Cinque Terre

17.08 K

Cinque Terre

3

ಸಂಬಂಧಿತ ಸುದ್ದಿ