ಹುಕ್ಕೇರಿ : 18 ಹಳ್ಳಿಗಳಿಗೆ ನೀರು ಪೂರೈಸುವ ಏತ ನೀರಾವರಿ ಯೋಜನೆ ಶುರುವಾಗಿ 10 ವರ್ಷ ಕಳೆದರೂ ಕೊನೆಯ 4 ಹಳ್ಳಿಗಳಿಗೆ ನೀರು ಬರುತ್ತಿಲ್ಲ ಎಂದು ಸುಮಾರು ಎರಡು ತಿಂಗಳ ಕಾಲ ರೈತರು ಅಹೋರಾತ್ರಿ ಹೋರಾಟ ನಡೆಸಿದರು. ಕೊನೆಗೆ ರೈತರ ಹೋರಾಟಕ್ಕೆ ಜಯ ಸಿಕ್ಕರೂ ಫಲವಿಲ್ಲದಂತಾಗಿದೆ. ಹಾಗಾದ್ರೆ ನೀರಿಗಾಗಿ ರೈತರ ಹೋರಾಟವಾದ್ರೂ ಏನು ಅಂತೀರಾ? ಈ ಕುರಿತು ಸ್ಟೋರಿ ಇದೆ ನೋಡಿ.
ಹಳ್ಳಿಗಳಿಗೆ ನೀರು ಪೂರೈಸುವ ಕೊಟಬಾಗಿ ಏತ ನೀರಾವರಿ ಯೋಜನೆಯಿಂದ ಎಲ್ಲಾ ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ ಎಂದು ಆಗ್ರಹಿಸಿ ಕೊಟಬಾಗಿ ಏತ ನೀರಾವರಿ ಕಚೇರಿ ಎದುರು ಸುಮಾರು ಎರಡು ತಿಂಗಳ ಕಾಲ ರೈತರು ಅಹೋರಾತ್ರಿ ಹೋರಾಟ ನಡೆಸಿದರು. ಒಂದೆಡೆ ಹಾಳಾದ ಕೆನಾಲ್, ಮತ್ತೊಂದೆಡೆ ದುರಸ್ತಿಯಾಗದೇ ಕೆಟ್ಟುಹೋದ ಪಂಪ್‌ಸೆಟ್‌ಗಳು, ಇದರಿಂದ ಸುಮಾರು 10 ವರ್ಷಗಳಿಂದ ಕೊನೆಯ ನಾಲ್ಕು ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ ಎಂದು ಹೋರಾಟ ನಡೆಸಿದರು. ರೈತರ ಹೋರಾಟದ ಬಳಿಕ ಪಂಪ್‌ಸೆಟ್‌ಗಳೆಲ್ಲ ದುರಸ್ತಿಯಾಗಿ ಶುರುವಾಗಿದೆ. ಇದರಿಂದ ರೈತರ ಹೋರಾಟಕ್ಕೆ ಒಂದೆಡೆ ಜಯ ಸಿಕ್ಕಂತಾಗಿದೆ ಎನ್ನುತ್ತಾರೆ ರೈತ ಹೋರಾಟಗಾರರು.
ಹುಕ್ಕೇರಿ ತಾಲೂಕಿನ ಕೊಟಬಾಗಿ ಸಮೀಪದ ಹಿರಣ್ಯಕೇಶಿ ನದಿಯಿಂದ ನೀರು ಎತ್ತಿ ಹುಲ್ಲೋಳಿ ಸಮೀಪದ ಜಾಕ್‌ವೆಲ್ ಮೂಲಕ ನಾಲೆ ಮೂಲಕ ನೀರು ಸರಬರಾಜು ಆಗುತ್ತದೆ. ಸದ್ಯ ಹೋರಾಟದ ಫಲವಾಗಿ ಪಂಪ್‌ಸೆಟ್‌ಗಳು ದುರಸ್ತಿಯಾಗಿ ಅಳವಡಿಕೆಯಾಗಿದೆ. ಆದರೆ ಇತ್ತ ನೀರು ಬಿಡುವ ಅವಧಿ ಮೀರಿದೆ; 90 ದಿನಗಳ ಅವಧಿಯಲ್ಲಿ ಕೇವಲ 6 ದಿನ ಮಾತ್ರ ನೀರು ಕೊನೆಯ ಹಳ್ಳಿಗಳಿಗೆ ತಲುಪಿದೆ. ಆದ್ದರಿಂದ ಈಗಾಗಲೇ ಹಿರಣ್ಯಕೇಶಿ ನದಿಯಲ್ಲಿ ನೀರಿಲ್ಲ, ಹಾಗಾಗಿ ರೈತರ ಹೋರಾಟಕ್ಕೆ ಜಯ ಸಿಕ್ಕರೂ ಫಲವಿಲ್ಲದಂತಾಗಿದೆ. ಆದ್ದರಿಂದ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ.
ಇತ್ತ ಎರಡು ತಿಂಗಳ ರೈತರ ಹೋರಾಟಕ್ಕೆ ಜಯ ಸಿಕ್ಕರೂ ಫಲವಿಲ್ಲದಂತಾಗಿದೆ. ಇತ್ತ ಮಳೆಯಿಲ್ಲದೆ ಕಂಗಾಲಾಗಿದ್ದ ಜನರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ. ಆದ್ದರಿಂದ ಹಿಡಕಲ್ ಜಲಾಶಯದಿಂದ ನೀರು ಹರಿಸಬೇಕು, ರೈತರ ಬದುಕಿಗೆ ಸ್ವಲ್ಪ ದಿನವಾದರೂ ನೀರಿನ ಆಸರೆಯಾಗುತ್ತದೆ ಎಂಬುದು ರೈತರ ಬೇಡಿಕೆಯಾಗಿದೆ.
PublicNext
18/09/2026 05:47 pm
LOADING...