ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕದ್ರಿ : ಮಂಗಳೂರು ಬನ್ಸ್ ಸವಿದ ಸಿಎಂ ಡಿಕೆ..!

ಕದ್ರಿ : ಬೆಳಗ್ಗೆಯೇ ಗಾಂಧಿ ಸ್ಕ್ವೇರ್ ಕೆಫೆಗೆ ಭೇಟಿ ನೀಡಿದ ಸಿಎಂ, ಮಂಗಳೂರಿನ ಯುವ ಕಂಟೆಂಟ್ ಕ್ರಿಯೇಟರ್‌ಗಳ ಜೊತೆ ಕುಳಿತು ಸ್ಥಳೀಯ ಶೈಲಿಯ ಉಪಹಾರ ಸವಿದು, ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಮಂಗಳೂರು ಬನ್ಸ್, ದೋಸೆ ಸೇರಿದಂತೆ ಕರಾವಳಿಯ ಸಾಂಪ್ರದಾಯಿಕ ತಿಂಡಿಗಳನ್ನು ಸವಿದ ಅವರು, ಯುವಕರ ಆಲೋಚನೆಗಳನ್ನು ಕೂಡ ಆಲಿಸಿದರು.

1934ರಲ್ಲಿ ಮಹಾತ್ಮ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳದ ನೆನಪನ್ನು ಹೊಂದಿರುವ ಈ ಪ್ರದೇಶದಲ್ಲಿ ನಡೆದ ಈ ಭೇಟಿಗೆ ವಿಶೇಷ ಮಹತ್ವ ಸಿಕ್ಕಿದೆ. ಇದಾದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಕದ್ರಿ ಮಂಜುನಾಥ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಒಂದೆಡೆ ಯುವಕರ ಜೊತೆ ಮಾತುಕತೆ, ಮತ್ತೊಂದೆಡೆ ದೇವರ ದರ್ಶನ… ಹೀಗೆ ಮಂಗಳೂರಿನಲ್ಲಿ ಸಿಎಂ ಅವರ ದಿನ ಆರಂಭವಾಯಿತು.

Edited By :
PublicNext

PublicNext

18/09/2026 07:47 pm

Cinque Terre

6.35 K

Cinque Terre

0

ಸಂಬಂಧಿತ ಸುದ್ದಿ