ಹುಬ್ಬಳ್ಳಿ: ಹುಬ್ಬಳ್ಳಿಯ ರಾಮನಗರದಲ್ಲಿ ಗಣೇಶೋತ್ಸವದ ಸಂಭ್ರಮದ ನಡುವೆ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂದೇಶ ಮೊಳಗಿದೆ. ಇಡೀ ರಾಮನಗರಕ್ಕೆ ಒಂದೇ ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಿ, ಎಲ್ಲರೂ ಒಗ್ಗಟ್ಟಾಗಿ ಹಬ್ಬ ಆಚರಿಸುತ್ತಿರುವುದು ಇದೀಗ ಗಮನ ಸೆಳೆದಿದೆ. ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಬಾಂಧವರು ಗಣಪತಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಹೌದು,,, ಇದು ಕೇವಲ ಗಣೇಶೋತ್ಸವವಲ್ಲ,,, ಇದು ಸಹಬಾಳ್ವೆಯ ಸಂಭ್ರಮ... ಇದು ಭಾವೈಕ್ಯತೆಯ ಪ್ರತೀಕ...
ಹುಬ್ಬಳ್ಳಿಯ ರಾಮನಗರದಲ್ಲಿ ಇಡೀ ಪ್ರದೇಶಕ್ಕೆ ಒಂದೇ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ, ಹಿಂದೂ–ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಮುಸ್ಲಿಂ ಬಾಂಧವರು ಕೂಡ ಪಾಲ್ಗೊಂಡು, ಹಿಂದೂ ಸಂಪ್ರದಾಯದಂತೆ ಗಣಪತಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿಂದೂ–ಮುಸ್ಲಿಂ ನಾವೆಲ್ಲರೂ ಒಂದೇ" ಎಂಬ ಸಂದೇಶದೊಂದಿಗೆ ಪರಸ್ಪರ ಪ್ರೀತಿ, ಗೌರವ ಮತ್ತು ಸಹೋದರತ್ವವನ್ನು ಸಾರಿದ್ದಾರೆ. ಧರ್ಮ ಬೇರೆ, ಆಚರಣೆ ಬೇರೆ... ಆದರೆ ಮಾನವೀಯತೆ ಒಂದೇ ಎಂಬ ಸಂದೇಶವನ್ನು ರಾಮನಗರದ ಗಣಪತಿ ಉತ್ಸವ ಸಾರಿದೆ.
ಹೀಗಾಗಿ, ರಾಮನಗರದ ಗಣಪತಿ ಪ್ರತಿಷ್ಠಾಪನೆ ಇಡೀ ಹುಬ್ಬಳ್ಳಿಗೆ ಭಾವೈಕ್ಯತೆಯ ಮಾದರಿಯಾಗಿ ಗಮನ ಸೆಳೆದಿದೆ.
ಇನ್ನು ಇಡೀ ಹುಬ್ಬಳ್ಳಿಗೆ ಮಾದರಿಯಾದ ರಾಮನಗರ ಗಣಪತಿ ಪ್ರತಿಷ್ಠಾಪನೆ. ಹಿಂದೂ ಮುಸ್ಲಿಂ ನಾವೆಲ್ಲರೂ ಒಂದೇ ಎಂಬ ಭಾವದಲ್ಲಿ ಪೂಜೆ ಸಲ್ಲಸಲ್ಲಿಸಿದ್ದು ಎಲ್ಲರಲ್ಲಿ ಸಂತಸ ಮೂಡಿದೆ.
ಕ್ಯಾಮೆರಾ ಪರ್ಸನ್ ಶೇಖರ್ ಜೊತೆ ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2026 09:41 pm
LOADING...