ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : 4ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಅಣ್ಣಿಗೇರಿ : ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಸ್ಥಳೀಯ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಆರಾಧ್ಯ ದೈವ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಆದಿಕವಿ ಪಂಪನ ಕಾವ್ಯಗಳು ಎಲ್ಲರ ಗಮನ ಸೆಳೆದವು. ಆದಿಕವಿ ಪಂಪನ ಭಾವಚಿತ್ರ, ಕನ್ನಡಾಂಬೆ ಭಾವಚಿತ್ರ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಹೋರಾಟಗಾರರ ಭಾವಚಿತ್ರಗಳು ನೋಡುಗರ ಗಮನ ಸೆಳೆದವು.

ಮೆರವಣಿಗೆಗೂ ಮುನ್ನ ಆದಿಕವಿ ಪಂಪನ ಮುಖ್ಯ ವೇದಿಕೆಯ ಮುಂದೆ ರಾಷ್ಟ್ರ ಧ್ವಜಾರೋಹಣವನ್ನು ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಪರಿಷತ್ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹಾಗೂ ಕನ್ನಡ ಧ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಅನ್ವರ ಹುಬ್ಬಳ್ಳಿ ನೆರವೇರಿಸಿದರು. ಧ್ವಜಾರೋಹಣದ ಅಧ್ಯಕ್ಷತೆಯನ್ನು ಉದ್ಯಮಿ ಮಲ್ಲಿಕಾರ್ಜುನ ಸುರಕೊಡ ವಹಿಸಿದ್ದರು.

ಮೆರವಣಿಗೆ ಶ್ರೀ ಅಮೃತೇಶ್ವರ ದೇವಸ್ಥಾನದಿಂದ ಆರಂಭಗೊಂಡು ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ, ಅಮೃತೇಶ್ವರ ಮಹಾದ್ವಾರ, ಜಾಡಗೇರಿ ಓಣಿ, ವಿವೇಕಾನಂದ ವೃತ್ತ, ಬಸ್ ನಿಲ್ದಾಣ, ಪುರಸಭೆ ಮುಂಭಾಗದ ಮೂಲಕ ಸಾಗಿ ಕಾರ್ಯಕ್ರಮದ ಮುಖ್ಯ ವೇದಿಕೆ ತಲುಪಿತು.

ಮೆರವಣಿಗೆಯಲ್ಲಿ ಶಾಸಕ ಕೋನರಡ್ಡಿ, ಕಸಾಪ ಹೋಬಳಿ ಮಟ್ಟದ ಅಧ್ಯಕ್ಷ ವಿ.ಡಿ. ಅಂದಾನಿಗೌಡ್ರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಹಸನಸಾಬ ಘುಡುನಾಯ್ಕರ, ಡಾ. ಮೋಹನ ಅಣ್ಣಿಗೇರಿ, ಪ್ರಾಚಾರ್ಯ ಎಸ್.ಎಸ್. ಹರ್ಲಾಪುರ, ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಪೂಜಾರ, ಪ್ರಕಾಶ ಅಂಗಡಿ, ಲಲಿತಾ ಸಾಲಿಮಠ, ಮಹೇಶ ಮುಂಡರಗಿ, ದೇವರಾಜ ನಾವಳ್ಳಿ, ವೀರೇಶ ಕುಬಸದ, ಸಾಹಿತಿ ಅಮೃತೇಶ ತಂಡರ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/09/2026 11:09 am

Cinque Terre

7.93 K

Cinque Terre

0

ಸಂಬಂಧಿತ ಸುದ್ದಿ