ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಣಪತಿ ವಿಸರ್ಜನೆ ಫೀಲ್ಡ್‌ಗೆ ಇಳಿದ ಪೊಲೀಸ್ ಕಮೀಷನರ್ ಭೂಷನ್ ಬೋರಸೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಖುದ್ದಾಗಿ ಪೊಲೀಸ್ ಕಮೀಷನರ್ ಭೂಷನ್ ಬೋರಸೆ ಅವರು ಫೀಲ್ಡ್‌ಗೆ ಇಳಿದಿದ್ದಾರೆ.

ಹೌದು, ನಗರದ ಗುಡಿಹಾಳ ರೋಡ್ ವಿಶಾಲ ನಗರ ಮಸೀದಿ ಹತ್ತಿರ ಕಮೀಷನರ್ ಭೂಷನ್ ಬೋರಸೆ ಅವರು, ಡಿಸಿಪಿ ಶೃತಿ ಎನ್. ಅವರು ನಿಂತು ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಡಿಜೆ ಸೌಂಡ್ ಪರಿಶೀಲನೆ ಕೂಡ ಮಾಡಲು ಪೊಲೀಸ್ ಸಿಬ್ಬಂದಿ ಇಟ್ಟಿದ್ದಾರೆ. ಅತೀ ಹೆಚ್ಚು ಸೌಂಡ್ ಬಿಟ್ಟರೆ ಸ್ಥಳದಲ್ಲೇ ಡಿಜೆ ಸೀಜ್ ಮಾಡುತ್ತಾರೆ. ಗಣಪತಿ ವಿಸರ್ಜನೆಗೆ ಹೊರಟಿದ್ದು, ಡಿಜೆ ಹಾಡಿಗೆ ಯುವಕರು ಡ್ಯಾನ್ಸ್ ಮಾಡುತ್ತಿದ್ದಾರೆ. ಪೊಲೀಸರು ಕೂಡ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2026 10:55 pm

Cinque Terre

38.58 K

Cinque Terre

2

ಸಂಬಂಧಿತ ಸುದ್ದಿ