ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಿಸಿಬಿ ಪೊಲೀಸರ ಬೃಹತ್ ದಾಳಿ, ಪೆಟ್ರೋಲ್, ಡೀಸೆಲ್ ವಶಕ್ಕೆ

ಬೆಳಗಾವಿ: ಬೆಳಗಾವಿ ನಗರದ ಸಿಸಿಬಿ ವಿಭಾಗದ ಪೊಲೀಸರಿಂದ ಅಕ್ರಮವಾಗಿ ಸಂಗ್ರಹಿಸಿಟ್ಟ ಪೆಟ್ರೋಲ್, ಡೀಸೆಲ್ ಅಡ್ಡೆ ಮೇಲೆ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ಅವರ ನೇತೃತ್ವದ ತಂಡದಿಂದ ಅಕ್ರಮ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಣೆ ಮೇಲೆ ಬೆಳಗಾವಿ ನಗರದ ದೇಸೂರ ಗ್ರಾಮದ ಹಾಟ್ ಪಾಟ್ ದಾಬಾ ಹತ್ತಿರ ದಾಳಿ ಮಾಡಿ, ಆರೋಪಿಗಳಾದ ತಮೀಮ ಹಸನಸಾಬ ಯರಗಟ್ಟಿ, ಸಾಕಿಬ ಶಮೀಮ ಅನ್ಸಾರಿ ಇವರಿಬ್ಬರೂ ತಮ್ಮ ಮಾಲೀಕ ಇಸ್ರಾರ ಮುಲ್ಲಾ ಸೂಚನೆಯಂತೆ ತಮ್ಮ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.

ಆರೋಪಿಗಳು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ, 99,000 ರೂ. ಮೌಲ್ಯದ 5 ಬ್ಯಾರಲ್‌ನಲ್ಲಿ 900 ಲೀಟರ್ ಹಾಗೂ 90,000 ಮೌಲ್ಯದ 5 ಬ್ಯಾರಲ್‌ನಲ್ಲಿ ಸುಮಾರು 900 ಲೀಟರ್‌ಗಳಷ್ಟು ಡೀಸೆಲ್ ಸಂಗ್ರಹಿಸಿಕೊಟ್ಟು ಮಾರಾಟ ಮಾಡಲು ಹೊರಟಾಗ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿತರಿಂದ ವಾಹನ ಸಮೇತ ಪೆಟ್ರೋಲ್, ಡೀಸೆಲ್ ಹೀಗೆ ಒಟ್ಟು ರೂ.6,89,000 ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ.

ಅಕ್ರಮದಲ್ಲಿ ಭಾಗಿಯಾದ ಎಲ್ಲ ಆರೋಪಿಗಳ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪ್ರ. ಸಂ. 215/2026 ಕಲಂ. 3, 7 ಅವಶ್ಯಕ ವಸ್ತುಗಳ ಕಾಯ್ದೆ-1955, ಕಲಂ.23 ಪೆಟ್ರೋಲಿಯಂ ಕಾಯ್ದೆ-1934, ಕಲಂ.3 ಮೋಟರ್ ಸ್ಪಿರಿಟ್ & ಹೈ ಸ್ಪೀಡ್ ಡೀಸೆಲ್ (ಸಪ್ಲೈ, ಡಿಸ್ಟ್ರಿಬ್ಯೂಷನ್ & ಪ್ರಿವಿನ್ಶನ್ ಆಫ್ ಮಾಲ್‌ ಪ್ರಾಕ್ಟಿಸ್) ಕಾಯ್ದೆ-2005 & ಕಲಂ. 287 ಬಿಎನ್‌ಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು, ತನಿಖೆ ಮುಂದುವರೆಸಲಾಗಿದೆ.

ಮೇಲಿನಂತೆ ದಾಳಿ ಕೈಗೊಂಡ ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ, ಪಿಎಸ್ಐ ಮಂಜುನಾಥ ಭಜಂತ್ರಿ, ಸಿಬ್ಬಂದಿಯವರ ಕಾರ್ಯವನ್ನು ಪ್ರಶಂಸಿಸಲಾಗಿದೆ.

Edited By :
Kshetra Samachara

Kshetra Samachara

18/09/2026 10:35 pm

Cinque Terre

2.52 K

Cinque Terre

0

ಸಂಬಂಧಿತ ಸುದ್ದಿ