ಬೈಂದೂರು ಪಟ್ಟಣ ಪಂಚಾಯಿತಿಯಿಂದ ಕುಗ್ರಾಮವನ್ನು ಕೈಬಿಡುವಂತೆ ಆಗ್ರಹಿಸಿ ರೈತರು ಕಳೆದ 410 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಉತ್ತರ ತುದಿಯಿಂದ ರೈತ ಸಂಘದ ಪ್ರಮುಖರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ್ದರು.
ಈ ಬೇಡಿಕೆ ಕುರಿತು ರೈತ ಸಂಘದ ಮುಖಂಡರು ಮೊದಲೇ ಮನವಿ ಸಲ್ಲಿಸಿದ್ದರೂ, ಸಿಎಂ ತಮ್ಮ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಭಾಷಣ ಮುಗಿಸಿ ಸಿಎಂ ತೆರಳುತ್ತಿದ್ದ ವೇಳೆ ಹಸಿರು ಶಾಲು ಹಿಡಿದು ‘ನ್ಯಾಯ ಬೇಕು, ನ್ಯಾಯ ಬೇಕು’ ಎಂದು ರೈತರು ಘೋಷಣೆ ಕೂಗಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಸಿಎಂ ಡಿ.ಕೆ. ಶಿವಕುಮಾರ್, ರೈತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ರೈತರು ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಿಎಂಗೆ ವಿವರಿಸಿದರು. ಬಳಿಕ ಬೆಂಗಳೂರಿಗೆ ಬರುವಂತೆ ರೈತರಿಗೆ ಸಿಎಂ ಸೂಚಿಸಿದ್ದು, ರೈತರಿಂದ ಮನವಿಯನ್ನು ಸ್ವೀಕರಿಸಿದರು.
PublicNext
19/09/2026 03:37 pm
LOADING...