ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಶೇಷ ಅಧಿವೇಶನ ವಿಚಾರ - ಕೇಂದ್ರ ಸಚಿವ ಹೆಚ್ಡಿ ಕುಮಾರಸ್ಚಾಮಿ ರಿಯಾಕ್ಷನ್

ಬೆಂಗಳೂರು - ರಾಜ್ಯ ಸರ್ಕಾರದಿಂದ ವಿಶೇಷ ಅಧಿವೇಶನ ಕರೆದಿರುವ ವಿಚಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ, ಕಸ್ತೂರಿ ರಂಗನ್ ವಿಚಾರದಲ್ಲಿ ಎಲ್ಲ ಪಕ್ಷಗಳ ಧ್ವನಿಯೂ ಒಂದೇ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಕೊಡಗು ಸೇರಿದಂತೆ ಆ ಭಾಗದ ರೈತರು ಪ್ರತಿಭಟನೆ ನಡೆಸ್ತಿದ್ದಾರೆ.

ಸಿಎಂ ಅವರು ಕಸ್ತೂರಿ ರಂಗನ್ ಮತ್ತು ಬರಗಾಲ ಚರ್ಚೆಗಾಗಿ ವಿಶೇಷ ಅಧಿವೇಶನ ಕರೆದಿದ್ದಾರೆ. ರಾಜ್ಯದಲ್ಲಿ ಕಸ್ತೂರಿ ರಂಗನ್ ವರಿದಿ ಜಾರಿಯಾಗಬಾರದು ಎಂದು ನಮ್ಮ ನಿಲುವು ಕೂಡ ಇದೆ. ಆದ್ರೆ ಬರಗಾಲದಲ್ಲಿ ಏನು ಚರ್ಚೆ ಮಾಡುತ್ತೀರಾ? ಇವರ ಬಳಿ ಏನಿದೆ? ರೈತರು ಎರಡು ಮೂರು ಬಾರಿ ಬಿತ್ತನೆ ಮಾಡಿದರೂ ಮೊಳಕೆಯೇ ಬಂದಿಲ್ಲ. ಹೀಗಾಗಿ ಬಿತ್ತನೆ ಬೀಜ ಖರೀದಿ, ಸಮಯ ಎಲ್ಲವೂ ನಾಶವಾಗಿದೆ.

ನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಸುಮ್ಮನೇ ದುಂದುವೆಚ್ಚ ಮಾಡಿಕೊಂಡು ಏನು ಚರ್ಚೆ ಮಾಡುತ್ತೀರಾ, ಬೇಕಾದರೆ ರೈತರ ಸಾಲಮನ್ನಾವನ್ನ ಸರ್ಕಾರ ಆರ್ಥಿಕತೆ ಬೇಕಿಲ್ಲ, ನೈಸ್ ಹೆಸರಿನಲ್ಲಿ ನೂರಾರು ಕೋಟಿ ನುಂಗುವುದಕ್ಕೆ‌ ಹೊರಟ್ಟಿದ್ದಾರೆ ಆಮೂಲಕ ಲೀಲಾಜಾಲವಾಗಿ ಮುಖ್ಯಮಂತ್ರಿಗಳು ರೈತರ ಸಾಲಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ

Edited By :
PublicNext

PublicNext

19/09/2026 07:31 pm

Cinque Terre

8.47 K

Cinque Terre

3

ಸಂಬಂಧಿತ ಸುದ್ದಿ