ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (NLSIU) ಯಲ್ಲಿ ಆಯೋಜಿಸಲಾಗಿದ್ದ ಜೆಎನ್‌ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಕುರಿತಾದ ವಿವಾದಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಅಧಿಕೃತವಾಗಿ ರದ್ದುಪಡಿಸಲಾಗಿದೆ.
ಲಲಿತ್ ವಚಾನಿ ನಿರ್ದೇಶನದ ‘Prisoner No. 626710 is Present’ ಸಾಕ್ಷ್ಯಚಿತ್ರವನ್ನು ಸೆಪ್ಟೆಂಬರ್ 14ರಂದು ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಕ್ಯಾಂಪಸ್‌ನಲ್ಲಿ ಉಂಟಾಗಬಹುದಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ಮೊದಲು ವ್ಯವಸ್ಥಾಪನಾ ಹಾಗೂ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಮುಂದೂಡಲಾಗಿತ್ತು.
ಎಬಿವಿಪಿ ವಿರೋಧ ಹಾಗೂ ಸ್ವಾಗತ: ಇದರ ನಡುವೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕಾರ್ಯಕ್ರಮವನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಎನ್‌ಎಲ್‌ಎಸ್‌ಐಯು ಆಡಳಿತ ಮಂಡಳಿಗೆ ಮನವಿ ಮಾಡಿತ್ತು. ಅಲ್ಲದೆ, ಈ ಸಂಬಂಧ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರಿಯೂ ಎಬಿವಿಪಿ ಮನವಿ ಸಲ್ಲಿಸಿತ್ತು.
ಪ್ರಸ್ತುತ ಸಾಕ್ಷ್ಯಚಿತ್ರ ಪ್ರದರ್ಶನ ರದ್ದುಗೊಂಡಿರುವುದನ್ನು ಎಬಿವಿಪಿ ಸಂಘಟನೆಯು ಮುಕ್ತಕಂಠದಿಂದ ಸ್ವಾಗತಿಸಿದ್ದು, ತನ್ನ ವಿರೋಧದ ಫಲವಾಗಿ ಈ ಕಾರ್ಯಕ್ರಮ ರದ್ದಾಗಿದೆ ಎಂದು ಹೇಳಿಕೊಂಡಿದೆ.
PublicNext
19/09/2026 08:40 pm
LOADING...