ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಶಿವಮೊಗ್ಗ : ಜನರ ಬದುಕು ಉಳಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ : ಸಿಎಂ ಡಿಕೆಶಿ

​ಶಿವಮೊಗ್ಗ : ಅರಣ್ಯ ಇಲಾಖೆಯವರು ರೈತರಿಗೆ ಹೊಸದಾಗಿ ನೋಟಿಸ್ ನೀಡಬಾರದು ಹಾಗೂ ಹೊಸ ಒತ್ತುವರಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.

​ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಭಾಗದಲ್ಲಿ ಎದುರಾಗಿರುವ ಆತಂಕಗಳು ಹಾಗೂ ಪರಿಣಾಮಗಳ ಕುರಿತು ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಂವಾದ ಮತ್ತು ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇದು ನಿಮ್ಮನ್ನು ಭೇಟಿ ಮಾಡಲು ಸಿಕ್ಕ ಅವಕಾಶ. ರೈತರಿಗೆ ಎದುರಾಗಿರುವ ಅಪಾಯವನ್ನು ಎದುರಿಸುವ ಕುರಿತು ಅಭಿಪ್ರಾಯ ಸಂಗ್ರಹಿಸಲು ಇಲ್ಲಿಗೆ ಬಂದಿದ್ದೇವೆ. ಏನೇ ಆದರೂ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಬೇಕು. ನಮಗೂ ಭೂಮಿ ಮತ್ತು ಪರಿಸರಕ್ಕೂ ನಿಕಟ ನಂಟಿದೆ.

​ನಿಮ್ಮ ಮನೆ ಬಾಗಿಲಿಗೆ ಬಂದು ಚರ್ಚಿಸಿದ ನಂತರ ವಿಶೇಷ ಅಧಿವೇಶನ ಕರೆದು ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಇಲ್ಲಿ ಮಳೆ-ಬಿಸಿಲಿದ್ದರೂ ಜನರು ಮತ್ತು ರೈತರು ಚರ್ಚೆ ಮುಗಿಯುವವರೆಗೆ ಎದ್ದು ಹೋಗಲಿಲ್ಲ. ಜನರಿಗೆ ಬದುಕು ಮುಖ್ಯ, ಸಮಸ್ಯೆಗಳಿಗೆ ಪರಿಹಾರ ಬೇಕು. ಸರ್ಕಾರದ ಆಡಳಿತ ಜನರ ಭಾವನೆಗಳಿಗೆ ಅನುಗುಣವಾಗಿರಬೇಕು. ಇದೇ ಉದ್ದೇಶದಿಂದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಿಂಗಳಿಗೆ ಎರಡು ಬಾರಿ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ತಾಲೂಕು, ಹೋಬಳಿ ಹಾಗೂ ಪಂಚಾಯಿತಿ ಮಟ್ಟಕ್ಕೆ ತೆರಳಿ ಜನರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸಲು 'ಪ್ರಜಾಸೇವಾ' ವಿಭಾಗವನ್ನು ಆರಂಭಿಸಲಾಗಿದೆ. ಜನರ ಭಾವನೆಗಳನ್ನು ಅರ್ಥೈಸಿಕೊಳ್ಳದಿದ್ದರೆ ಅವರ ಸಮಸ್ಯೆಗಳನ್ನು ತಿಳಿಯುವುದು ಕಷ್ಟ," ಎಂದು ಅಭಿಪ್ರಾಯಪಟ್ಟರು.

​"ರೈತರು ಕಾಲಕಾಲದಿಂದಲೂ ಪರಿಸರವನ್ನು ಕಾಪಾಡಿಕೊಂಡು ಬಂದಿದ್ದೀರಿ, ನೀವು ಇಲ್ಲಿಂದ ವಲಸೆ ಹೋಗಬಾರದು. ಅದಕ್ಕಾಗಿಯೇ 364 ಕಿ.ಮೀ. ಕರಾವಳಿ ಪ್ರದೇಶದೊಂದಿಗೆ ಮಲೆನಾಡನ್ನೂ ಸೇರಿಸಿ ಹೊಸ 'ಇಕೋ ಟೂರಿಸಂ' ನೀತಿ ತರಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದರು.

​"ನಾನು ನಿಮ್ಮೊಂದಿಗಿದ್ದೇನೆ, ರೈತರ ಪರವಾಗಿದ್ದೇನೆ. ಅರಣ್ಯ ಭಾಗದಲ್ಲಿ ಪಾರಂಪರಿಕವಾಗಿ ಜಮೀನು ಉಳುಮೆ ಮಾಡಿಕೊಂಡು ಬಂದಿರುವವರಿಗೆ ತೊಂದರೆ ನೀಡಬೇಡಿ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಬಗರ್ ಹುಕುಂ ಹಾಗೂ 'ಉಳುವವನೇ ಭೂಮಿಯ ಒಡೆಯ' ಹಕ್ಕನ್ನು ತಂದಿದ್ದು ನಮ್ಮ ಸರ್ಕಾರ. ರೈತರನ್ನು ಕಾಪಾಡುವ ಉದ್ದೇಶದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಜೊತೆಗೆ ಅಡಿಕೆ ತೆರಿಗೆ ಕಡಿತದ ಬಗ್ಗೆಯೂ ಕೇಂದ್ರ ಸರ್ಕಾರದೊಂದಿಗೆ ಮಾತನಾಡುತ್ತೇನೆ," ಎಂದು ಭರವಸೆ ನೀಡಿದರು.

Edited By : Vinayak Patil
PublicNext

PublicNext

19/09/2026 08:42 pm

Cinque Terre

4.18 K

Cinque Terre

2

ಸಂಬಂಧಿತ ಸುದ್ದಿ