ಶಿವಮೊಗ್ಗ :ರಾಜ್ಯದ ಜನರ ಆರ್ಥಿಕ ಸಬಲೀಕರಣ ಹಾಗೂ ಸರ್ಕಾರಿ ಜಮೀನಿನ ಸದ್ಬಳಕೆಯ ಉದ್ದೇಶದಿಂದ ಸರ್ಕಾರವು ವಿನೂತನ 'ತೇಗದ ಸಿರಿ' ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತೀರ್ಥಹಳ್ಳಿ ಯಲ್ಲಿ ಮಾತನಾಡಿದ ಅವರು,
ಈ ಯೋಜನೆಯ ಮುಖ್ಯ ಲಕ್ಷಣವೆಂದರೆ ಸರ್ಕಾರದ ಬಳಿ ಇರುವ ಖಾಲಿ ಹಾಗೂ ಬಳಕೆಯಾಗದ ಭೂಮಿಯಲ್ಲಿ ಮೌಲ್ಯಯುತವಾದ ತೇಗದ ಗಿಡಗಳನ್ನು ಬೆಳೆಸಲಾಗುತ್ತದೆ. ಈ ಗಿಡಗಳನ್ನು ಪೋಷಿಸಿ ಬೆಳೆಸುವ ರೈತರು ಹಾಗೂ ಭಾಗವಹಿಸುವ ಸಾರ್ವಜನಿಕರಿಗೆ ಹೆಚ್ಚಿನ ಆರ್ಥಿಕ ನೆರವು ಸಿಗುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ಶೇ.70 ರಷ್ಟು ಪಾಲು ತೇಗ ಬೆಳೆದು ಪೋಷಿಸುವ ಫಲಾನುಭವಿಗಳಿಗೆ.
ಶೇ. 30 ಪಾಲು ರಾಜ್ಯ ಸರ್ಕಾರಕ್ಕೆ ಸಿಗಲಿದೆ.ಗ್ರಾಮೀಣ ಪ್ರದೇಶದ ಜನರಿಗೆ ದೀರ್ಘಾವಧಿಯ ಆರ್ಥಿಕ ಭದ್ರತೆ ನೀಡುವುದು ನಮ್ಮ ಆಶಯ. ಈ ಯೋಜನೆಯ ಮೂಲಕ ಸಾರ್ವಜನಿಕ ಆಸ್ತಿಗೆ ಮೌಲ್ಯವರ್ಧನೆ ಸಿಗುವುದರ ಜೊತೆಗೆ, ರೈತರ ಕೈಗೆ ಹೆಚ್ಚಿನ ಲಾಭಾಂಶ ತಲುಪಿ ಅವರ ಆರ್ಥಿಕ ಮಟ್ಟ ಸುಧಾರಿಸಲಿದೆ ಎಂದರು.
PublicNext
19/09/2026 07:57 pm
LOADING...