ನವದೆಹಲಿ: ಭದ್ರತಾ ಲೋಪ'ದ ಗಂಭೀರ ಹಿನ್ನೆಲೆಯಲ್ಲಿ, ಪ್ರಮುಖ ಜವಾಬ್ದಾರಿಯಲ್ಲಿದ್ದ ಭಾರತೀಯ ಪೊಲೀಸ್ ಸ್ನೈಪರ್ ದೀಪಕ್ ಬಂಗಾರ್ ಅವರು ಅಮಾನತುಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ವಿದೇಶಿ ನಿಯೋಗಿಗಳು ತಂಗಿದ್ದ ಹೋಟೆಲ್‌ನ ಮೇಲ್ಭಾಗದಲ್ಲಿ ಅತ್ಯಾಧುನಿಕ ಶಸ್ತ್ರಸಜ್ಜಿತರಾಗಿ ಭದ್ರತೆಗೆ ನಿಂತಿದ್ದ ತಮ್ಮ ಸ್ವಂತ ದೃಶ್ಯವನ್ನು ಸ್ನೈಪರ್ ದೀಪಕ್ ಬಂಗಾರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅತಿ ಗಣ್ಯರ ಭದ್ರತೆಯ ಸೂಕ್ಷ್ಮತೆಯನ್ನು ಮೀರಿ ಈ ರೀತಿಯ ರಹಸ್ಯ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವುದು ಭದ್ರತಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಘಟನೆಯ ಗಂಭೀರತೆಯನ್ನು ಪರಿಗಣಿಸಿ ಅಧಿಕಾರಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ತಕ್ಷಣವೇ ನಿರ್ಬಂಧಿಸಿದ್ದಾರೆ. ಅಲ್ಲದೆ, ಸದರಿ ಸ್ನೈಪರ್‌ನನ್ನು ಕೂಡಲೇ 'ಬ್ರಿಕ್ಸ್' ಭದ್ರತಾ ಕರ್ತವ್ಯದಿಂದ ಸಂಪೂರ್ಣವಾಗಿ ಬಿಡುಗಡೆಗೊಳಿಸಿದ್ದಾರೆ.
PublicNext
19/09/2026 08:46 pm
LOADING...