ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯ ನಡುವೆಯೂ ಕರ್ತವ್ಯನಿಷ್ಠೆ ಮೆರೆದ ಪೊಲೀಸ್ ಸಿಬ್ಬಂದಿ - ವಿಡಿಯೋ ವೈರಲ್

ಬೆಂಗಳೂರು: ವಾಹನ ದಟ್ಟಣೆಯ ಪ್ರಮುಖ ಸಮಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳು ಹಾಗೂ ಮೇಲ್ಸೇತುವೆಗಳು ಜಲಾವೃತಗೊಂಡು, ನಗರದ ಜನಜೀವನ ಹಾಗೂ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು.

ರಸ್ತೆಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ರಾಜಕಾಲುವೆ ವ್ಯವಸ್ಥೆ ಇಲ್ಲದೆ ಹಲವೆಡೆ ಮಳೆನೀರು ನಿಂತು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಸುರಿಯುತ್ತಿರುವ ಧಾರಾಕಾರ ಮಳೆಯನ್ನು ಲೆಕ್ಕಿಸದೆ, ನಿಂತ ನೀರು ಹರಿದು ಹೋಗಲು ಸ್ವತಃ ತಾವೇ ಚರಂಡಿ ಮಾರ್ಗವನ್ನು ಹುಡುಕಿ ನೀರು ಸರಾಗವಾಗಿ ಹೋಗಲು ಅನುವು ಮಾಡಿಕೊಟ್ಟಿದ್ದಾರೆ. ಈ ದೃಶ್ಯದ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಪೊಲೀಸ್ ಸಿಬ್ಬಂದಿಯ ಈ ಅಚಲ ಕರ್ತವ್ಯನಿಷ್ಠೆ ಹಾಗೂ ಜನಪರ ಕಾಳಜಿಯನ್ನು ಕಣ್ತುಂಬಿಕೊಂಡ ನೆಟ್ಟಿಗರು ಮತ್ತು ಸಾರ್ವಜನಿಕರು ಫಿದಾ ಆಗಿದ್ದು, “ಪೊಲೀಸ್ ಎಂದರೆ ಕೇವಲ ಭಯವಲ್ಲ, ಬದಲಿಗೆ ಅದು ಭರವಸೆ ಮತ್ತು ನಂಬಿಕೆ” ಎಂದು ಮುಕ್ತಕಂಠದಿಂದ ಶ್ಲಾಘಿಸಿ ಕಾಮೆಂಟ್ ಮಾಡುತ್ತಿದ್ದಾರೆ.

Edited By :
PublicNext

PublicNext

19/09/2026 08:48 pm

Cinque Terre

8.5 K

Cinque Terre

0

ಸಂಬಂಧಿತ ಸುದ್ದಿ