ಮೈಸೂರು : ನೀರಿನ ಸಂಪು ಸ್ವಚ್ಛಗೊಳಿಸಲು ತೆರಳಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಅರ್ಥಿಂಗ್ ಸಮಸ್ಯೆಯಿಂದ ನೀರಿನಲ್ಲಿ ಒದ್ದಾಡಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನ ಬೈಲುಕುಪ್ಪೆಯಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಪ್ರಕಾಶ್ (27) ಮೃತಪಟ್ಟ ದುರ್ದೈವಿ. ಕೆಲಸ ಹುಡುಕಿಕೊಂಡು ಮೈಸೂರಿಗೆ ಬಂದಿದ್ದ ಪ್ರಕಾಶ್, ಬೈಲುಕುಪ್ಪೆಯಲ್ಲಿ ಹಾರ್ಡ್‌ವೇರ್ ಅಂಗಡಿ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.
ನೀರಿನ ಸಂಪು ತೊಳೆಯುವ ಸಂದರ್ಭದಲ್ಲಿ ಅರ್ಥಿಂಗ್ ಸಮಸ್ಯೆಯಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಕುರಿತು ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/10/2026 11:02 am
LOADING...