ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೆ ದಂತ ಮಾರಾಟದಲ್ಲಿ ತೊಡಗಿದ್ದ ಇಬ್ಬರ ಬಂಧನ

ಮೈಸೂರು: ಸಮೀಪದ ಚಿಕ್ಕಹಳ್ಳಿ ಗ್ರಾಮದ ವ್ಯಾಪ್ತಿಯ ಶ್ರೀ ರಾಮ ಬಡಾವಣೆಯ ಮೊಸಂಬಾಯನಹಳ್ಲಿ ರಸ್ತೆಯಲ್ಲಿ ಆನೆ ದಂತ ಮಾರಾಟದಲ್ಲಿ ತೊಡಗಿದ್ದವರನ್ನು ಅರಣ್ಯ ಸಂಚಾರದಳದವರು ಬಂಧಿಸಿದ್ದಾರೆ.

ಹುಣಸೂರು ತಾಲೂಕಿನ ಬಲ್ಲೇನಹಳ್ಳಿಯ ರವಿಚಂದ್ರ, ಮೈಸೂರಿನ ಕ್ಯಾತಮಾರನಹಳ್ಳಿಯ ರಾಜೇಂದ್ರ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಆರೋಪಿಗಳಿಂದ ಆನೆ ದಂತ, ಅದನ್ನು ಸಾಗಿಸಲು ಬಳಿಸಿದ್ದ ಬೈಕ್, ಬ್ಯಾಗಗಳು ಮತ್ತು ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಾಮರಾಜನಗರ ಸಿಸಿಎಫ್ ಡಾ.ಮಾಲತಿಪ್ರಿಯಾ ಹಾಗೂ ಮೈಸೂರು ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಿ.ವೈ ರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆನೆ ಕಾರ್ಯಪಡೆಯ ಎ.ಸಿ.ಎಫ್ ರುದ್ರೇಶ್.ಜಿ, ವಲಯ ಅರಣ್ಯಾಧಿಕಾರಿ ಸುರೇಂದ್ರ ಕೆ. ಉಪ ವಲಯ ಅರಣ್ಯಾಧಿಕಾರಿಗಳಾದ ಕನ್ನಿಕಾ ಟಿ.ಸಿ, ಸುಮಲತ ಎ.ಎಂ ಹೇಮಂತ್ ಕುಮಾರ್ ಹೆಚ್.ಬಿ, ಶ್ರೀ ಸುರೇಶ್ ಕೆ, ಗಸ್ತು ಅರಣ್ಯ ಪಾಲಕರಾದ ಶ್ರೀ ತಿರುಪತಿ ಪೂಜಾರ, ಶ್ರೀ ಸಿದ್ದರಾಜಶೆಟ್ಟಿ, ಇಮಾಮ ಸಾಬ ಸಗರಿ ಇವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Edited By :
Kshetra Samachara

Kshetra Samachara

25/10/2026 05:09 pm

Cinque Terre

380

Cinque Terre

0

ಸಂಬಂಧಿತ ಸುದ್ದಿ