ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಯುವತಿ ವಿಚಾರಕ್ಕೆ ಗಲಾಟೆ , ಯುವಕರ ಮೇಲೆ ಹಲ್ಲೆ

ಮೈಸೂರು : ಯುವತಿಯ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ಯುವಕರ ಗುಂಪೊಂದು ಕೆಲ ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಮಾನಸ ಗಂಗೋತ್ರಿ ಸಮೀಪದ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ.

ಘಟನೆಯ ವೇಳೆ ಹಲ್ಲೆಗೊಳಗಾದವರಲ್ಲಿ ಈ ಗಲಾಟೆಗೆ ಯಾವುದೇ ಸಂಬಂಧವಿಲ್ಲದ ಯುವಕನೂ ಇದ್ದಾನೆ ಎನ್ನಲಾಗಿದೆ. ಗುಂಪು ಯುವಕನ ಬೈಕ್‌ ಅನ್ನು ಕೆಳಕ್ಕೆ ಬೀಳಿಸಿದ್ದು, ಇದನ್ನು ಪ್ರಶ್ನಿಸಿದ ಮತ್ತೊಬ್ಬ ಯುವಕನ ಮೇಲೂ ಹಲ್ಲೆ ನಡೆಸಿದೆ. ಈ ಸಂಪೂರ್ಣ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಸ್ಥಳೀಯವಾಗಿ ಗಮನ ಸೆಳೆದಿದೆ.

Edited By :
PublicNext

PublicNext

25/10/2026 11:23 am

Cinque Terre

4.94 K

Cinque Terre

0

ಸಂಬಂಧಿತ ಸುದ್ದಿ