ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ದಸರಾದಲ್ಲಿ ಕಾಣಸಿಕ್ಕ ತುಳು ಮಾತನಾಡುವ ಜರ್ಮನ್ ಮಹಿಳೆ

ಮಂಗಳೂರು: ಮಂಗಳೂರು ದಸರಾಕ್ಕೆ ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಹೀಗೆ ಬಂದ ಜರ್ಮನ್ ದೇಶದ ಪ್ರಜೆ ಯಾನಾ ಎಂಬ ಮಹಿಳೆಯ ತುಳುಭಾಷಾ ಪ್ರೇಮಕ್ಕೆ ತುಳುವರೇ ಫಿದಾ ಆಗಿದ್ದಾರೆ. ಯಾನಾ ತುಳುವಿನಲ್ಲೇ ಮಾತನಾಡಿ ತುಳುಭಾಷಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಯಾನಾ ಅವರು ಮಂಗಳೂರು ಮೂಲದ ತುಳುವಿನ ವ್ಯಕ್ತಿಯನ್ನೇ ಮದುವೆಯಾಗಿದ್ದು, ಇವರಿಗೆ ಸಾರಾ ಮತ್ತು ಡೆನ್ನಿಸ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು ಕೂಡಾ ತುಳು ಮಾತನಾಡುವ ಆಸಕ್ತಿ ಹೊಂದಿದ್ದಾರೆ. ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಒಲವು ಹೊಂದಿದ್ದು ಈ ಬಾರಿಯ ಮಂಗಳೂರು ದಸರಾಕ್ಕೆ ಆಗಮಿಸಿ ಶಾರದಾ ವಿಸರ್ಜನೆ, ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

Edited By :
PublicNext

PublicNext

22/10/2026 02:16 pm

Cinque Terre

11.47 K

Cinque Terre

0

ಸಂಬಂಧಿತ ಸುದ್ದಿ