ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಚಿನ್ನದ ಇತಿಹಾಸಕ್ಕೆ ಹೊಸ ಅಧ್ಯಾಯ: ನವೀಕೃತ ರೂಪದಲ್ಲಿ ದಿ ಒರಿಜಿನಲ್ ಆಭರಣ!

ಉಡುಪಿ: ಚಿನ್ನ ಅಂದ್ರೆ ಬರೀ ಆಭರಣವಲ್ಲ… ಅದು ಪ್ರತಿಯೊಂದು ಕುಟುಂಬದ ಭಾವನೆ, ತಲೆಮಾರುಗಳಿಂದ ಮುಂದುವರಿಯುವ ಸಂಪ್ರದಾಯ, ನೆನಪುಗಳ ಜೊತೆಗೆ ಬೆಸೆದುಕೊಂಡಿರುವ ಅಮೂಲ್ಯ ಸಂಪತ್ತು. ಇಂತಹ ಚಿನ್ನದ ಆಭರಣಗಳ ಲೋಕದಲ್ಲಿ, ಒಂಬತ್ತು ದಶಕಗಳಿಗೂ ಹೆಚ್ಚು ಕಾಲ ತನ್ನದೇ ಆದ ವಿಶ್ವಾಸ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಉಡುಪಿಯ ಹೆಮ್ಮೆಯ ಸಂಸ್ಥೆ 'ದಿ ಒರಿಜಿನಲ್ ಆಭರಣ!'

1935ರಲ್ಲಿ ಆರಂಭವಾದ ಈ ಸುದೀರ್ಘ ಪಯಣಕ್ಕೆ ಸಾಕ್ಷಿಯಾಗಿದ್ದ ಅದೇ ಐತಿಹಾಸಿಕ ತಾಣದಲ್ಲಿ, ಇದೀಗ ಹೊಸತನದ ಸ್ಪರ್ಶದೊಂದಿಗೆ ಮತ್ತೊಮ್ಮೆ ತೆರೆದುಕೊಂಡಿದೆ ಸಂಸ್ಥೆಯ ಮೂಲ ಮಳಿಗೆ. ಉಡುಪಿಯ ಸಿ.ಬಿ. ರಸ್ತೆಯಲ್ಲಿರುವ ಈ ಐತಿಹಾಸಿಕ ಮಳಿಗೆಯನ್ನು ನವೀಕೃತಗೊಳಿಸಿ, ಪರಂಪರೆಯ ಸೊಬಗು ಮತ್ತು ಆಧುನಿಕ ವಿನ್ಯಾಸಗಳ ಸೊಗಸನ್ನು ಒಂದೇ ಸೂರಿನಡಿ ಪರಿಚಯಿಸಲಾಗಿದೆ. ದಶಕಗಳ ಅನುಭವ, ತಲೆಮಾರುಗಳ ವಿಶ್ವಾಸ ಹಾಗೂ ಇಂದಿನ ಕಾಲಕ್ಕೆ ತಕ್ಕ ಆಭರಣಗಳ ವೈವಿಧ್ಯ... ಇವೆಲ್ಲವನ್ನೂ ಒಟ್ಟುಗೂಡಿಸಿರುವ ಈ ನವೀಕೃತ ಫ್ಲ್ಯಾಗ್‌ಶಿಪ್ ಮಳಿಗೆ, ಸಂಸ್ಥೆಯ ಪಯಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

2026ರ ಅಕ್ಟೋಬರ್ 21ರಂದು ನಡೆದ ಈ ಶುಭಾರಂಭ ಸಮಾರಂಭದಲ್ಲಿ, ಗೀತಾ ಪೈ, ಸುಮನಾ ಪ್ರಭು, ಶಾಲಿನಿ ಜಿ. ಶಂಕರ್, ಸಂಧ್ಯಾ ಪೈ, ರೋಹಿಣಿ ಶೆಣೈ, ಚಲನಚಿತ್ರ ನಟಿ ಅಂಕಿತಾ ಅಮರ್, ಲತಾ ಹೆಗ್ಡೆ, ಗೀತಾ ಹೆಗ್ಡೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಮಧುಕರ್ ಎಸ್. ಕಾಮತ್ ಅವರು ಗಣ್ಯರೊಂದಿಗೆ ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ನವೀಕೃತ ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಸುಭಾಸ್ ಎಂ. ಕಾಮತ್, ನಿರ್ದೇಶಕರಾದ ಮಹೇಶ್ ಎಂ. ಕಾಮತ್, ಸಂಧ್ಯಾ ಎಸ್. ಕಾಮತ್, ವೀಣಾ ಎಂ. ಕಾಮತ್, ಡಾ. ಅರುಣ್ ಕುಡುವ, ಕ್ಷಮಾ ಕುಡುವ, ಆಕರ್ಷ್ ಎಂ. ಕಾಮತ್, ಶ್ಲೋಕಾ ಕಾಮತ್, ಅದಿತ್ರಿ ಕಾಮತ್ ಸೇರಿದಂತೆ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದು, ಸಂಭ್ರಮಕ್ಕೆ ಸಾಕ್ಷಿಯಾದರು.

ಗುಣಮಟ್ಟ, ವಿಶ್ವಾಸ ಮತ್ತು ಪರಂಪರೆಯ ಮೇಲಿನ ಬದ್ಧತೆ ಮಾತ್ರ ಎಂದಿಗೂ ಬದಲಾಗಿಲ್ಲ.

ಹಳೆಯ ನೆನಪುಗಳಿಗೆ ಹೊಸ ಮೆರುಗು… ಪರಂಪರೆಗೆ ಆಧುನಿಕತೆಯ sparsha ಉಡುಪಿಯ ಚಿನ್ನಾಭರಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿರುವ ದಿ ಒರಿಜಿನಲ್ ಆಭರಣ, ಇದೀಗ ನವೀಕೃತ ರೂಪದಲ್ಲಿ ಮತ್ತೊಮ್ಮೆ ಗ್ರಾಹಕರನ್ನು ಸ್ವಾಗತಿಸುತ್ತಿದೆ. ಇದು ಕೇವಲ ಒಂದು ಮಳಿಗೆಯ ಪುನರಾರಂಭವಲ್ಲ… ಒಂಬತ್ತು ದಶಕಗಳ ವಿಶ್ವಾಸಕ್ಕೆ ಹೊಸ ಕಿರೀಟ ತೊಡಿಸಿದ ಸಂಭ್ರಮ!

Edited By : Somashekar
PublicNext

PublicNext

22/10/2026 06:33 pm

Cinque Terre

18.27 K

Cinque Terre

0

ಸಂಬಂಧಿತ ಸುದ್ದಿ