ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ : ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಕೊಪ್ಪಳ : ಕೊಪ್ಪಳ ತಾಲೂಕಿನ ಬಸಾಪುರ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನಾಪತ್ತೆಯಾದ ಘಟನೆ ಮಂಗಳವಾರ ಜರುಗಿದ್ದು, ಗುರುವಾರ ಬೆಳಿಗ್ಗೆ ಸಾಣಾಪುರ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.

ಗೆಳೆಯರೊಂದಿಗೆ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿದ್ದ, ಬಸಾಪುರ ಗ್ರಾಮದ ನಿವಾಸಿ ಟಿ. ಕಿರಣ್ ಗೌಡ (17) ನಾಪತ್ತೆಯಾಗಿದ್ದ ಘಟನೆ ಮಂಗಳವಾರ ಜರುಗಿತ್ತು. ಇಬ್ಬರು ಗೆಳೆಯರೊಂದಿಗೆ ಈಜಲು ಹೋಗಿದ್ದ ಕಿರಣ್, ಈಜುತ್ತಾ ದಡ ಮುಟ್ಟುವಾಗ ಇಬ್ಬರು ಸ್ನೇಹಿತರು ದಡ ಸೇರಿದ್ದು ಕಿರಣ್ ಗೌಡ ನೀರಿನಲ್ಲಿ ನಾಪತ್ತೆಯಾಗಿದ್ದನು. ಕಿರಣನೊಂದಿಗೆ ಈಜಲು ತೆರಳಿದ್ದ ಗೆಳೆಯರು ತಕ್ಷಣ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಮುನಿರಾಬಾದ್ ಪೊಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮುನಿರಾಬಾದ್ ಠಾಣೆಯ ಪಿಎಸ್ಐ ಅಮರೇಗೌಡ ಪರಿಶೀಲನೆ ನಡೆಸಿದ್ದು, ಸ್ಥಳೀಯ ಈಜುಗಾರರ ನೆರವಿನೊಂದಿಗೆ ಕಳೆದ ಎರಡು ದಿನಗಳಿಂದ ಶೋಧ ಕಾರ್ಯ ಆರಂಭಿಸಿದ್ದರು. ಗುರುವಾರ ಬೆಳಿಗ್ಗೆ ಸಾಣಾಪುರ ಕೆರೆಯಲ್ಲಿ ಕಿರಣ್ ಗೌಡನ ಮೃತದೇಹ ಪತ್ತೆಯಾಗಿದೆ.

ಯುವಕ ಕಿರಣ್ ಕಾಣೆಯಾದ ಬೆನ್ನಲ್ಲೇ ಬೃಹತ್ ಗಾತ್ರದ ಮೊಸಳೆಗಳು ಪ್ರತ್ಯಕ್ಷವಾಗಿದ್ದವು, ಇದರಿಂದ ಮೊಸಳೆಗಳು ಕಿರಣನನ್ನು ತಿಂದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿತ್ತು. ಆದರೆ ಗುರುವಾರ ಸಾಣಾಪುರ ಕೆರೆಯಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ರೈತರು ಮತ್ತು ಗ್ರಾಮಸ್ಥರಲ್ಲಿ ಆತಂಕ ಕಡಿಮೆಯಾಗಿದೆ.

ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

23/10/2026 12:34 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ