ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಲ್ಸೇತುವೆಯಿಂದ ಕೆಳಗಡೆ ಬಿದ್ದ ಲಾರಿ: ಲಾರಿಯಲ್ಲಿದ್ದ ಚಾಲಕರ ಸ್ಥಿತಿ ಚಿಂತಾಜನಕ

ಕೊಪ್ಪಳ : ಸೊಲ್ಲಾಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಈರುಳ್ಳಿ ಲೋಡ್ ಲಾರಿಯೊಂದು ಮೇಲ್ಸೇತುವೆಯಿಂದ ಕೆಳಗಡೆ ಬಿದ್ದಿದ್ದು, ಲಾರಿಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಮುನಿರಾಬಾದ್ ರಾಷ್ಟ್ರೀಯ ಹೆದ್ದಾರಿ ಹುಲಿಗಿ ಕ್ರಾಸ್ ಬಳಿ ಮಂಗಳವಾರ ಜರುಗಿದೆ.

ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆ ಮೇಲಿಂದ ಕೆಳಗಿನ ಸರ್ವಿಸ್ ರಸ್ತೆಯಲ್ಲಿ ಲಾರಿ ಬಿದ್ದಿದ್ದು, ಲಾರಿ ಚಾಲಕ ಹಾಗೂ ಸಹಾಯಕ ಚಾಲಕ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ, ಇನ್ನೋರ್ವ ಚಾಲಕನಿಗೆ ಗಂಭೀರ ಗಾಯವಾಗಿದೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಅಪಘಾತದಲ್ಲಿ ಸೋಮನಾಥ ತಂದೆ ಅಂಕುಶ (28) ಹಾಗೂ ಅಜಿತ್ ಪವಾರ್ ತಂದೆ ಹರಿದಾಸ್ (40) ವರ್ಷ ಗಂಭೀರ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಇಬ್ಬರೂ ಮಹಾರಾಷ್ಟ್ರದ ಪಂಢರಪುರ ನಿವಾಸಿಗಳು ಎಂದು ಮುನಿರಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಇಬ್ಬರನ್ನು ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮುನಿರಾಬಾದ್‌ನ ತೋಟಗಾರಿಕೆ ಕಾಲೇಜು ಬಳಿಯ ಸೇತುವೆ ಬಳಿ ಸಂಜೆ ಸುಮಾರು 4:30ಕ್ಕೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

03/11/2026 09:46 pm

Cinque Terre

5.46 K

Cinque Terre

0

ಸಂಬಂಧಿತ ಸುದ್ದಿ