ಕೊಪ್ಪಳ: ಹಿಂದೂ ಸಮಾವೇಶದಲ್ಲಿ ಮುಸ್ಲಿಂ ಸಹೋದರಿಯೊಬ್ಬರು ಕುಂಭ ಹೊತ್ತು ಪಾಲ್ಗೊಳ್ಳುವ ಮೂಲಕ ಧರ್ಮದ ಗಡಿಗಳನ್ನು ಮೀರಿ ಮಾನವೀಯತೆ ಮತ್ತು ಸರ್ವಧರ್ಮ ಸಾಮರಸ್ಯದ ಸಂದೇಶ ಸಾರಿದ ಘಟನೆ ಗಮನ ಸೆಳೆದಿದೆ.
ಗಂಗಾವತಿ ನಗರದಲ್ಲಿ ಮಂಗಳವಾರ ನಡೆದ ಹಿಂದೂ ಸಮಾವೇಶದಲ್ಲಿ ಮುಸ್ಲಿಂ ಸಹೋದರಿಯೊಬ್ಬರು ಕುಂಭ ಹೊತ್ತು ಭಾಗವಹಿಸಿದ್ದು, ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯಿತು. ಧರ್ಮ ಯಾವುದೇ ಇರಲಿ, ಪರಸ್ಪರ ಗೌರವ, ಪ್ರೀತಿ ಮತ್ತು ಸಹಬಾಳ್ವೆಯೇ ಮುಖ್ಯ ಎಂಬ ಸಂದೇಶವನ್ನು ಈ ಮೂಲಕ ಸಾರಿದರು.
ಧರ್ಮದ ಹೆಸರಿನಲ್ಲಿ ಭೇದಭಾವ ಮೂಡುತ್ತಿರುವ ಇಂದಿನ ಸಂದರ್ಭದಲ್ಲಿ ಈ ಸಹೋದರಿಯ ನಡೆ ಸರ್ವಧರ್ಮ ಸಮನ್ವಯ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಮಾದರಿಯಾಗಿದೆ.
PublicNext
04/11/2026 07:35 am
LOADING...