ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಕೃಪಾ ಆಳ್ವ ಯಾವ ಪಕ್ಷದವರು ಎಂಬುದನ್ನು ಸ್ಪಷ್ಟಪಡಿಸಲಿ; ಜನಾರ್ದನ ರೆಡ್ಡಿ

ಕೊಪ್ಪಳ: ಆನೆಗೊಂದಿಯಲ್ಲಿ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ವಿಚಾರ, ಹಾಲಿನ ದರ ಏರಿಕೆ, ಅಂಜನಾದ್ರಿ ವಿವಾದ ಹಾಗೂ ಬಲ್ಡೋಟಾ ಕಾರ್ಖಾನೆ ವಿರೋಧಿ ಹೋರಾಟ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರು ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಕೃಪಾ ಆಳ್ವ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೀಗ ಕುಮಾರಸ್ವಾಮಿ ಅವರ ಹೆಸರನ್ನು ತರುವ ಮೊದಲು ಕೃಪಾ ಆಳ್ವ ಅವರು ಯಾವ ಪಕ್ಷದವರು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಅವರು ಏಳು ವರ್ಷ ಆಡಳಿತ ನಡೆಸಿದವರು. ಅವರ ರಾಜೀನಾಮೆಯ ನಂತರವೂ ಈ ವಿಚಾರ ಹೊರಬರದಂತೆ ತಡೆಯುವ ಉದ್ದೇಶದಿಂದ ಸ್ಟಿಂಗ್ ಮಾಡಲಾಗಿದೆ ಎಂದು ಆರೋಪಿಸಿದರು.

ಹಾಲಿನ ದರ ಏರಿಕೆಗೆ ಆಕ್ಷೇಪ

ಹಾಲಿನ ದರ ಏರಿಕೆ ಮಾಡಿರುವುದು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಹೊರಿಸಿದಂತಾಗಿದೆ. ದೊಡ್ಡ ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗಿದೆ. ಸರ್ಕಾರದ ಬಳಿ ಹಣವಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳುತ್ತಿದ್ದಾರೆ. ಅಂತಹ ಸರ್ಕಾರ ಯಾಕೆ ಬೇಕು ಎಂದು ಪ್ರಶ್ನಿಸಿದರು.

ಅಂಜನಾದ್ರಿ ವಿವಾದಕ್ಕೆ ನ್ಯಾಯಾಲಯದ ತೀರ್ಪೇ ಅಂತಿಮ

ಅಂಜನಾದ್ರಿಯಲ್ಲಿ ವಿದ್ಯಾದಾಸ ಬಾಬಾ ಮತ್ತು ಜಿಲ್ಲಾಡಳಿತದ ನಡುವಿನ ತಿಕ್ಕಾಟದ ಕುರಿತು ಮಾತನಾಡಿ, ಜಿಲ್ಲಾಡಳಿತ ಹಾಗೂ ಮುಜರಾಯಿ ಸಚಿವರು ಅಂಜನಾದ್ರಿಗೆ ಬಂದು ನ್ಯಾಯಾಲಯದ ತೀರ್ಪಿನಂತೆ ನಡೆದುಕೊಳ್ಳಲಿ. ಹಿಂದೂ ದೇವಾಲಯದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದರು.

11 ಹೋಂ ಸ್ಟೇಗಳಿಗೆ ಪರವಾನಗಿ

ಆನೆಗೊಂದಿ ಭಾಗದಲ್ಲಿ ಕಾನೂನುಬದ್ಧವಾಗಿ 11 ಹೋಂ ಸ್ಟೇಗಳಿಗೆ ಪರವಾನಗಿ ನೀಡಲಾಗುವುದು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗವಿಶ್ರೀಗಳ ಅಪಮಾನಕ್ಕೆ ಆಕ್ರೋಶ

ಬಲ್ಡೋಟಾ ಕಂಪನಿಯ ವಿರುದ್ಧ ಹೋರಾಟ ನಡೆಸಿದವರು ಗವಿಶ್ರೀಗಳು. ದೇಶದಲ್ಲಿಯೇ ಮಾದರಿಯಾಗಿರುವ ಇಂತಹ ಸ್ವಾಮೀಜಿಗಳ ವಿರುದ್ಧ ಹೋರಾಟದ ನೆಪದಲ್ಲಿ ಇತ್ತೀಚೆಗೆ ಅಪಮಾನ ಮಾಡಿರುವುದು ಸರಿಯಲ್ಲ. ಕಾರ್ಖಾನೆಗಳಿಗೆ ಸಹಕಾರ ನೀಡುತ್ತಿರುವ ಹಿಟ್ನಾಳ ಸಹೋದರರು ಸ್ವಾಮೀಜಿಗಳ ವಿರುದ್ಧ ಮಾತನಾಡಬಾರದಿತ್ತು ಎಂದು ಶಾಸಕ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

Edited By :
PublicNext

PublicNext

02/11/2026 08:55 pm

Cinque Terre

8.62 K

Cinque Terre

0

ಸಂಬಂಧಿತ ಸುದ್ದಿ