ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಳಿ ನುಂಗಲು ಬಂದಿದ್ದ ಬೃಹತ್ ಹೆಬ್ಬಾವು ಸೆರೆ

ಕೊಪ್ಪಳ : ಜಿಲ್ಲೆಯ ಶಿವಪುರ ಕ್ರಾಸ್ ಬಳಿಯ ಗಂಗಾವತಿ–ಹಿಟ್ನಾಳ ಮುಖ್ಯ ರಸ್ತೆಯ ಕಿರು ಕಾಲುವೆ ಸಮೀಪ ಸುಮಾರು 20 ಕೆ.ಜಿ. ತೂಕದ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು.

ಶಿವಪುರ ಕ್ರಾಸ್ ಬಳಿಯ ಅಂಗಡಿಯೊಂದಕ್ಕೆ ಕೋಳಿ ನುಂಗಲು ಬಂದಿದ್ದ ಹೆಬ್ಬಾವು ನಿನ್ನೆ ತಡರಾತ್ರಿ ಕಾಣಿಸಿಕೊಂಡಿದೆ. ಹೆಬ್ಬಾವನ್ನು ನೋಡಲು ಹಾಗೂ ಅದರ ದೃಶ್ಯವನ್ನು ಸೆರೆಹಿಡಿಯಲು ಯುವಕರು ಮುಗಿಬಿದ್ದಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉರಗ ಸಂರಕ್ಷಕರಾದ ಸ್ನೇಕ್ ಸೈಮನ್ ಹಾಗೂ ಮಲ್ಲು ಅವರು ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿದರು.

ಸುಮಾರು ಐದರಿಂದ ಆರು ವರ್ಷ ವಯಸ್ಸಿನ, 20 ಕೆ.ಜಿ. ತೂಕದ ಬೃಹತ್ ಹೆಬ್ಬಾವನ್ನು ರಕ್ಷಿಸಿದ ಉರಗ ಸಂರಕ್ಷಕರು, ಬಳಿಕ ಮುನಿರಾಬಾದ್ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

Edited By :
PublicNext

PublicNext

04/11/2026 10:29 am

Cinque Terre

7.68 K

Cinque Terre

0

ಸಂಬಂಧಿತ ಸುದ್ದಿ