ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

*ಕೊಪ್ಪಳ: ಚೆಂಡು ಹೂವಿನ ಹೊಲದಲ್ಲಿ ಅರಳಿದ ಮೋದಿ ಹೆಸರು*

ಕೊಪ್ಪಳ: ಚೆಂಡು ಹೂವಿನ ಕೃಷಿಯಲ್ಲಿ ವಿನೂತನ ಪ್ರಯೋಗ ಮಾಡುವ ಮೂಲಕ ರೈತರೊಬ್ಬರು ಗಮನ ಸೆಳೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಕ್ಕಳಿ ಗ್ರಾಮದ ರೈತ ಬಸವರಾಜ ಜಾಲಿಹಾಳ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಚೆಂಡು ಹೂವಿನ ಕೃಷಿ ಮಾಡಿದ್ದು, ಕೆಂಪು ಚೆಂಡು ಹೂವುಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಮೂಡಿಸುವಂತೆ ವಿಶೇಷ ವಿನ್ಯಾಸ ರೂಪಿಸಿದ್ದಾರೆ.

ಹಸಿರು ಗಿಡಗಳ ನಡುವೆ ಅರಳಿ ನಿಂತಿರುವ ಕೆಂಪು ಚೆಂಡು ಹೂವುಗಳಿಂದ ಮೂಡಿಬಂದಿರುವ ಮೋದಿ ಹೆಸರು ನೋಡುಗರ ಗಮನ ಸೆಳೆಯುತ್ತಿದೆ. ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಈ ದೃಶ್ಯಗಳು ರೈತನ ವಿಭಿನ್ನ ಕೃಷಿ ಪ್ರಯತ್ನಕ್ಕೆ ಸಾಕ್ಷಿಯಾಗಿವೆ.

ಸಾಂಪ್ರದಾಯಿಕ ಕೃಷಿಯ ಜೊತೆಗೆ ಸೃಜನಶೀಲತೆ ಮೆರೆದಿರುವ ಬಸವರಾಜ ಜಾಲಿಹಾಳ ಅವರ ಪ್ರಯತ್ನ ಇದೀಗ ವಿಶೇಷ ಆಕರ್ಷಣೆಯಾಗಿದೆ.

Edited By :
PublicNext

PublicNext

03/11/2026 06:08 pm

Cinque Terre

4.57 K

Cinque Terre

1

ಸಂಬಂಧಿತ ಸುದ್ದಿ