ಗದಗ: ಇಂದು ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಗದಗದಲ್ಲಿ ಪೊಲೀಸರು & ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ ಜೋರಾಗಿತ್ತು. ಗದಗ ನಗರದ ಮತದಾನ ಕೇಂದ್ರದ ಬಳಿ ಪೊಲೀಸರ ಜೊತೆ ಕಾಂಗ್ರೆಸ್ ಕಾರ್ಯಕರ್ತ ವಾಗ್ವಾದ ನಡೆಸಿದ ಚಿತ್ರಣ ಕಂಡು ಬಂತು. ಮುನ್ಸಿಪಲ್ ಕಾಲೇಜ್ ಮತಗಟ್ಟೆಸಂಖ್ಯೆ 55, 56, ಬಳಿ ವಾಕ್ಸಮರ ನಡೆದಿದೆ. ಬಿಜೆಪಿ ಕಾರ್ಯಕರ್ತರು ಶಾಲು ಹಾಕಿಕೊಂಡು ಮತಗಟ್ಟೆ ಆವರಣಕ್ಕೆ ಎಂಟ್ರಿ ಕೊಟ್ಟದ್ದರಿಂದ ವಾಗ್ವಾದ ನಡೆದಿದೆ.
ಶಾಲು ಹಾಕಿಕೊಂಡವ್ರನ್ನು ಯಾಕೆ ಒಳಗೆ ಬಿಡ್ತಾಯಿದ್ದೀರಿ ಅಂತ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ಮಾಡಿದ್ರೆ ಇತ್ತ ಬಿಜೆಪಿ ಕಾರ್ಯಕರ್ತರಿಂದ ಜಯಘೋಷ ವ್ಯಕ್ತವಾಗಿದೆ.
PublicNext
23/10/2026 09:05 pm
LOADING...