ಹುಬ್ಬಳ್ಳಿ : ಬೆಳಗಾವಿ ಜಿಲ್ಲೆಯ ಸೌದತ್ತಿಯ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಶೀಗಿಹುಣ್ಣಿಮೆಯಿಂದ ದೀಪಾವಳಿ ಅಮಾವಾಸ್ಯೆಯವರೆಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರದಂದು ಹುಬ್ಬಳ್ಳಿ ಮತ್ತು ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ನೇರವಾಗಿ ವಿಶೇಷ ಬಸ್‌ಗಳು ಸಂಚರಿಸಲಿವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಭಕ್ತಾದಿಗಳ ಮನವಿಯ ಮೇರೆಗೆ ಕಳೆದ ವರ್ಷ ಶೀಗಿಹುಣ್ಣಿಮೆಯಿಂದ ದೀಪಾವಳಿವರೆಗಿನ ಅವಧಿಯಲ್ಲಿ ವಿಶೇಷ ಬಸ್‌ಗಳನ್ನು ಓಡಿಸಲಾಗಿತ್ತು. ಈ ಬಸ್‌ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪ್ರಯಾಣಿಸಿದ್ದರು. ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ನೇರವಾಗಿ ಹೋಗಿ ಬರಲು ವಿಶೇಷ ಬಸ್‌ಗಳಿಂದ ಭಕ್ತಾದಿಗಳಿಗೆ ಅನುಕೂಲವಾಗಿತ್ತು. ಆದ್ದರಿಂದ ಈ ವರ್ಷವೂ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿತ್ತು.
ಅದರಂತೆ, ಶೀಗಿಹುಣ್ಣಿಮೆಯಂದು ಹಾಗೂ ದೀಪಾವಳಿ ಅಮಾವಾಸ್ಯೆಯವರೆಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 26, 27, 30 ಹಾಗೂ ನವೆಂಬರ್ 1, 3 ಮತ್ತು 6ರಂದು ಬಸ್‌ಗಳು ಸಂಚರಿಸಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.
ವಿಶೇಷ ಬಸ್ ಸಂಚಾರ ಮಾರ್ಗಗಳು
ಹುಬ್ಬಳ್ಳಿ–ಯಲ್ಲಮ್ಮನಗುಡ್ಡ: ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ಬಸ್‌ಗಳು ಹೊರಡಲಿದ್ದು, ಧಾರವಾಡ, ಅಮ್ಮಿನಭಾವಿ ಹಾಗೂ ಸವದತ್ತಿ ಮಾರ್ಗವಾಗಿ ಸಂಚರಿಸಲಿವೆ.
ನವಲಗುಂದ–ಯಲ್ಲಮ್ಮನಗುಡ್ಡ: ನವಲಗುಂದ ಬಸ್ ನಿಲ್ದಾಣದಿಂದ ಬಸ್‌ಗಳು ಹೊರಡಲಿದ್ದು, ಗೊಬ್ಬರಗುಂಪಿ, ಅಳಗವಾಡಿ, ಹಂಚಿನಾಳ ಹಾಗೂ ಹಿರೇಕುಂಬಿ ಮಾರ್ಗವಾಗಿ ಸಂಚರಿಸಲಿವೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/10/2026 01:21 pm
LOADING...