ಹಾವೇರಿ: ಆಣೂರು-ಕನವಿ ಮಲ್ಲಾಪುರ ಗ್ರಾಮದ ಜಮೀನಿನಲ್ಲಿ ಚಿರತೆ ನಿಗೂಢವಾಗಿ ಸಾವನ್ನಪ್ಪಿದೆ. ಚಿರತೆ ದೇಹದ ತುಂಬೆಲ್ಲಾ ಪರಚಿದ ಗಾಯಗಳ ಗುರುತು ಪತ್ತೆ ಆಗಿದೆ. ಕಾದಾಟದ ವೇಳೆ ಗಾಯಗೊಂಡು ಚಿರತೆ ಸಾವಿನ ಬಗ್ಗೆ ಶಂಕೆ ವ್ಯಕ್ತ ಪಡಿಸಲಾಗಿದೆ. 1ರಿಂದ 2 ವರ್ಷ ವಯಸ್ಸಿನ ಹೆಣ್ಣು ಚಿರತೆ ಸಾವನ್ನಪ್ಪಿದ್ದು ತಾಂತ್ರಿಕ ಸಮಿತಿ ಸಮ್ಮುಖದಲ್ಲಿ ಚಿರತೆ ದೇಹ ವಿಲೇವಾರಿ ಮಾಡಲಾಗಿದೆ. ಹಾವೇರಿ ಅರಣ್ಯ ವಿಭಾಗದ ಬ್ಯಾಡಗಿ ವಲಯದಲ್ಲಿ ಘಟನೆ ನಡೆದಿದೆ.
Kshetra Samachara
29/10/2026 10:32 am
LOADING...