ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ : 5.27 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳ್ಳತನ; ಆರು ಮಂದಿ ಬಂಧನ

ಶಿಗ್ಗಾವಿ : ಸುಮಾರು ₹5.27 ಲಕ್ಷ ಮೌಲ್ಯದ ತಾಮ್ರದ ಕೇಬಲ್‌ಗಳು, ಬ್ಯಾಟರಿಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಆರು ಆರೋಪಿಗಳನ್ನು ಬಂಧಿಸುವಲ್ಲಿ ಹುಲಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್ 11ರಂದು ಶಿಗ್ಗಾವಿ ತಾಲೂಕಿನ ಕೆಂಗಾಪುರ ಗ್ರಾಮದ ಶ್ರೀಕಾಂತ ದುಂಡಿಗೌಡ್ರ ಅವರಿಗೆ ಸೇರಿದ ಸ್ಟೋನ್ ಕ್ರಷರ್ ಹಾಗೂ ಡಾಂಬರ್ ಪ್ಲಾಂಟ್‌ನ ಕೊಠಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಈ ವೇಳೆ ಸುಮಾರು ₹5.27 ಲಕ್ಷ ಮೌಲ್ಯದ ಕಾಪರ್ ಕೇಬಲ್‌ಗಳು, ಬ್ಯಾಟರಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಕಳವು ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಗ್ಗಾವಿ ತಾಲೂಕಿನ ಬನ್ನೂರು, ಬೆಳವಲಕೊಪ್ಪ ಹಾಗೂ ಶಿಗ್ಗಾವಿ ಪಟ್ಟಣದ ನಿವಾಸಿಗಳಾದ ಕುಮಾರ, ಅಭಿನಂದನ, ವಿನೋದ ಅಲಿಯಾಸ್ ಮೈಲಾರಿ, ಮಹ್ಮದಗೌಸ್ ಹಾಗೂ ಪುಂಡಲೀಕ ಸೇರಿದಂತೆ ಆರು ಆರೋಪಿಗಳನ್ನು ಹುಲಗೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವರದಿ: ರಮೇಶ್ ಸೋಮಕ್ಕನವರ್, ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

01/11/2026 03:05 pm

Cinque Terre

5.46 K

Cinque Terre

0

ಸಂಬಂಧಿತ ಸುದ್ದಿ