ಸವಣೂರು: ಚಿಲ್ಲೂರಬಡ್ನಿ ಗ್ರಾಮದಿಂದ ರುದ್ರಭೂಮಿಗೆ ತೆರಳುವ ಸುಮಾರು 500 ಮೀಟರ್ ರಸ್ತೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಸಾಮಾಗ್ರಿ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗುತ್ತಿಗೆದಾರ ಮಂಜುನಾಥ್ ತಿಮ್ಮಾಪುರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಗಟ್ಟಿಯಾಗಿ ಕಲ್ಲಿನಂತಾಗಿರುವ ಸೀಮೆಂಟ್ ಕಾಂಕ್ರೀಟ್ ಹಾಗೂ ಅನುಮೋದನೆ ಇಲ್ಲದ ಸಿಂಗಲ್ ಫಿಲ್ಟರ್ ಎಂ-ಸ್ಯಾಂಡ್ ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನು ಹಾವೇರಿ ಲ್ಯಾಂಡ್ ಆರ್ಮಿ ಕಚೇರಿಯಿಂದ ಬಂದಿರುವ ಶಂಭು ಎಸ್. ಕಟ್ಟಿ ಎಂಬುವವರು ತಾವು ಇಂಜಿನಿಯರ್ ಎಂದು ಹೇಳಿಕೊಂಡಿದ್ದು, ದೂರವಾಣಿ ಕರೆಯಲ್ಲಿ ಕಳಪೆ ಎಂ-ಸ್ಯಾಂಡ್ ಬಳಕೆಯ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ. ಅವರ ಅಧಿಕೃತ ಹುದ್ದೆ ಹಾಗೂ ಕಾಮಗಾರಿಯಲ್ಲಿನ ಜವಾಬ್ದಾರಿಯ ಬಗ್ಗೆಯೂ ಸಾರ್ವಜನಿಕರು ಸ್ಪಷ್ಟನೆ ಕೇಳುತ್ತಿದ್ದಾರೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನಿಸಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಈ ಕುರಿತು ಶಾಸಕ ಯಾಶೀರ ಅಹಮದ್ ಖಾನ್ ಪಠಾಣ್ ಅವರು ಮಧ್ಯಪ್ರವೇಶಿಸಿ, ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಹಾಗೂ ನಿರ್ಮಾಣ ಸಾಮಗ್ರಿಗಳ ಪ್ರಯೋಗಾಲಯ ಪರೀಕ್ಷೆ ನಡೆಸಿಸಬೇಕು. ಕಳಪೆ ಕಾಮಗಾರಿ ಸಾಬೀತಾದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
PublicNext
02/11/2026 05:13 pm
LOADING...