ಹಾವೇರಿ : ತಾನು ಪ್ರೀತಿಸುತಿದ್ದ ಪ್ರೇಮಿಯನ್ನ ಕರೆದೊಯ್ಯಲು ಬಂದಿದ್ದ ಯುವಕ ಹಾಗೂ ಆತನ ಸ್ನೇಹಿತರನ್ನು ಹಿಡಿದು ಕಂಬಕ್ಕೆ ಕಟ್ಟಿ, ಅರೆಬೆತ್ತಲೆಗೊಳಿಸಿ ಮನಸೋ ಇಚ್ಛೆ ಥಳಿಸಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಅಕ್ಟೋಬರ್ 27 ರಂದು ನಡೆದಿದೆ ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಟ್ಟಿಹಳ್ಳಿ ಪಟ್ಟಣದ ಪ್ರಮೋದ್ ಹಾಗೂ ಬತ್ತಿಕೊಪ್ಪ ಗ್ರಾಮದ ಭಾವನಾ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ರಿಜಿಸ್ಟರ್ ಮದುವೆಯಾಗಲು ಹೊರಟಿದ್ದರಂತೆ. ಈ ವಿಚಾರ ತಿಳಿದ ಹುಡುಗಿ ಪೋಷಕರು ಆಕೆಯನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ
ಆದರೆ ಭಾವನಾ ಮತ್ತೆ ತನ್ನ ಪ್ರಿಯತಮ ಪ್ರಮೋದ್‌ಗೆ ಪತ್ರ ಬರೆದು ಮದುವೆಯಾಗುವಂತೆ ಸಂದೇಶ ರವಾನಿಸಿದ್ದಳು ಎನ್ನಲಾಗಿದೆ. ಈ ಹಿನ್ನೆಲೆ ಭಾವನಾಳನ್ನು ಮನೆಯಿಂದ ಕರೆದುಕೊಂಡು ಹೋಗಲು ಪ್ರೇಮಿ, ಹಾಗೂ ತನ್ನ ಸ್ನೇಹಿತರಾದ ಪ್ರಮೋದ್ ಪ್ರಕಾಶ್ ಮತ್ತು ಪರಶುರಾಮ್ ಜೊತೆ ಬತ್ತಿಕೊಪ್ಪ ಗ್ರಾಮಕ್ಕೆ ಬಂದಿದ್ದು ಈ ವಿಷಯ ಮನೆಯವರಿಗೆ ತಿಳಿದಿದ್ದು ಇವರನ್ನು ಹಿಡಿದು ಗ್ರಾಮದ ಕಂಬಕ್ಕೆ ಕಟ್ಟಿ ತಳಿಸಿದ್ದಾರೆ,
ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/11/2026 07:15 pm
LOADING...