ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್: ಬಡವರ ಪಾಲಿನ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ, 31 ಚೀಲ ಅಕ್ಕಿ ವಶ

ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಹೊರವಲಯದ ಧರ್ಮಾ ಕಾಲುವೆ ಸಮೀಪ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, KA-31/8331 ಸಂಖ್ಯೆಯ ಟಾಟಾ Ac ವಾಹನದಲ್ಲಿದ್ದ 50 ಕೆ.ಜಿ ತೂಕದ 31 ಚೀಲ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹಾನಗಲ್‌ನ ಕುರಬಗೇರಿ ಓಣಿ ನಿವಾಸಿ ಸತೀಶ್ ಪಾಪಣ್ಣನವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರ ಬಡವರ ಆಹಾರ ಭದ್ರತೆಗಾಗಿ ನೀಡುವ ಉಚಿತ ಅಕ್ಕಿ ಕಳ್ಳಸಾಗಣೆಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೇವಲ ವಾಹನ-ಅಕ್ಕಿ ಜಪ್ತಿ ಮಾಡುವುದಷ್ಟೇ ಅಲ್ಲದೆ, ಈ ಅಕ್ರಮ ಜಾಲದ ಸಂಪೂರ್ಣ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

Edited By :
PublicNext

PublicNext

02/11/2026 01:13 pm

Cinque Terre

6.29 K

Cinque Terre

0

ಸಂಬಂಧಿತ ಸುದ್ದಿ