ಹಾನಗಲ್ : ಪಟ್ಟಣದ ಪಾಳಾ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಓರ್ವನನ್ನು ಹಾನಗಲ್ ಪೊಲೀಸರು ಬಂಧಿಸಿ, 420 ಗ್ರಾಂ ಗಾಂಜಾ ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ.
ಅಕ್ಟೋಬರ್ 26ರಂದು ಪಾಳಾ ಕ್ರಾಸ್ ಬಳಿ ನಿಷೇಧಿತ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಮಾರಾಟದ ಆರೋಪದ ಮೇಲೆ ತಿಳವಳ್ಳಿ ಗ್ರಾಮದ ಅಮ್ಜದ್ಅಲಿ ಅಬ್ದುಲ್ ಮುನಾಫ್ ಮುಲ್ಲಾ (26) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿತನಿಂದ ಅಂದಾಜು ₹15 ಸಾವಿರ ಮೌಲ್ಯದ 420 ಗ್ರಾಂ ಅರೆಹಸಿ ಗಾಂಜಾ, ಹಳದಿ ಬಣ್ಣದ ಕೈಚೀಲ ಹಾಗೂ ಕೆಎ-27/ಇಯು-8369 ನೋಂದಣಿ ಸಂಖ್ಯೆಯ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್ ಜಪ್ತಿ ಮಾಡಲಾಗಿದೆ.
ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು . ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವರದಿ : ಲೋಕೇಶ್ ಸುಣಗಾರ್ PublicNext ಹಾನಗಲ್
Kshetra Samachara
29/10/2026 03:51 pm
LOADING...