ಕೊಪ್ಪಳ: ಕೊಪ್ಪಳ ಜಿಲ್ಲೆಯ ಜಾನಪದ ಕಲಾ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಜಿಲ್ಲೆಯ ಇಬ್ಬರು ಹಿರಿಯ ಕಲಾವಿದರಾದ ದಾವಲಸಾಬ ಅತ್ತಾರ ಹಾಗೂ ಶಿವಲಿಂಗಪ್ಪ ಅವರು 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈ ಗೌರವ ನೀಡಿದೆ.
ಹೆಗಲುವೇಷ ಕಲೆಯ ಮೂಲಕ ಜನಮನ ಗೆದ್ದಿರುವ ಶಿವಲಿಂಗಪ್ಪ ಹಾಗೂ ಗೀಗೀ ಪದ ಕಲೆಯ ಮೂಲಕ ಜನಪದ ಪರಂಪರೆಯನ್ನು ಶ್ರೀಮಂತಗೊಳಿಸಿರುವ ದಾವಲಸಾಬ ಅತ್ತಾರ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.
Kshetra Samachara
31/10/2026 12:50 pm
LOADING...