ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕ್ಷಣಾರ್ಧದಲ್ಲಿ ಮಾಯ

ದಾವಣಗೆರೆ : ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ದಾವಣಗೆರೆ ನಗರದ ಭೂಮಿಕಾ ನಗರದಲ್ಲಿ ಘಟನೆ ನಡೆದಿದೆ. ಕಾರು ತೆಗೆದುಕೊಂಡು ಹೋಗುವ ದೃಶ್ಯ CC ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದಾವಣಗೆರೆ ನಗರದಲ್ಲೇ ಕಳೆದ ಎರಡು ತಿಂಗಳಲ್ಲಿ 5 ಕಾರುಗಳ ಕಳ್ಳತನವಾಗಿದೆ. ಸರಸ್ವತಿ ಬಡಾವಣೆ, ಭೂಮಿಕಾ ನಗರ, ಜಯನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಕಳ್ಳತನ ಆಗ್ತಾ ಇರೋದು ನಿವಾಸಿಗಳಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

ಕೆ.ಟಿ.ಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಅನ್ನೋ ಮಾಹಿತಿ ಇದೆ.

Edited By :
PublicNext

PublicNext

31/10/2026 07:21 pm

Cinque Terre

8.95 K

Cinque Terre

0

ಸಂಬಂಧಿತ ಸುದ್ದಿ